ಕೊಲೆ ಅರೋಪಿಗಳ ಬಂಧನ

arre
Published on

ವಿಜಯವಾಣಿ ಸುದ್ದಿಜಾಲ ನೆಲಮಂಗಲ

ನಗರದಲ್ಲಿ ಕಾರಿನಲ್ಲಿ ಅಪಹರಿಸಿ ಕೊಲೆ ಮಾಡಿ ಬಳಿಕ ತುಮಕೂರಿನಲ್ಲಿ ಮೃತದೇಹ ಬಿಸಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಶನಿವಾರ ಬಂಧಿಸಿದ್ದಾರೆ.

ವಾಗಡಿ ತಾಲೂಕು ಸೋಲೂರು ಗ್ರಾಮದ ದಿನೇಶ್(35), ತುಮಕೂರಿನ ಜೈಪುರ ನಿವಾಸಿಗಳಾದ ವರುಣ್(22), ಅರುಣ್ (21), ಮಾದೇಶ್ (22) ಬಂಧಿತರು.

ಏ.27 ರಂದು ವಾಗಡಿ ತಾಲೂಕು ಕೂಡ್ಲೂರು ನಿವಾಸಿ ದಿಲೀಪ್‌ಕುವಾರ್ ಎಂಬುವರನ್ನು ಹತ್ಯೆ ಮಾಡಲಾಗಿತ್ತು. ದಿಲೀಪ್‌ಕುಮಾರ್ ಪತ್ನಿ ಹಾಗೂ ಮಕ್ಕಳೊಂದಿಗೆ ನಗರ ಬಸ್ ನಿಲ್ದಾಣ ಬಳಿ ಬಂದ ವೇಳೆ ದುಷ್ಕರ್ಮಿಗಳು ವಾರಕಾಸಗಳಿಂದ ಹಲ್ಲೆ ವಾಡಿ ಬಳಿಕ ಕಾರಿನಲ್ಲಿ ಅಪಹರಿಸಿ ಕೊಲೆ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡ ನಗರ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕ ಭರತ್‌ಗೌಡ ನೇತೃತ್ವದ ತಂಡ ಅರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನ್ಕಕ್ಕೆ ಒಪ್ಪಿಸಿದ್ದಾರೆ.

ಮೊಬೈಲ್ ನೆಟ್‌ವರ್ಕ್‌ನಿಂದ ಪತ್ತೆ: ಮೃತ ದಿಲೀಪ್‌ಕುಮಾರ್ ಎರಡನೇ ಪತ್ನಿ ಅಮತಾ ತನ್ನ ಮೊದಲನೇ ಪತಿ ದಿನೇಶ್ ಕೊಲೆ ವಾಡಿದ್ದಾನೆಂದು ಠಾಣೆಗೆ ದೂರು ನೀಡಿದ್ದರ ಹಿನ್ನೆಲೆಯಲ್ಲಿ ಪೊಲೀಸರು ದಿನೇಶ್ ಮೊಬೈಲ್ ನೆಟ್‌ವರ್ಕ್ ಅಧಾರಿಸಿ ಏ.29ರಂದು ವಾಗಡಿ ತಾಲೂಕಿನ ಬಿಟ್ಟಸಂದ್ರಪಾಳ್ಯದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.

ಹತ್ಯೆಗೆ ಸಂಚು: ಅಮೃತಾಳ ಮೊದಲನೇ ಪತಿ ದಿನೇಶ್ ಹಾಗೂ ದಿಲೀಪ್‌ಕುವಾರ್ ನಡುವೆ ದ್ವೇಷ ಉಂಟಾಗಿತ್ತು ಬಳಿಕ ದಿನೇಶ್ ಇದರೊಂದ ಆಕ್ರೋಶಗೊಂಡು ದಿಲೀಪ್‌ನನ್ನು ಹತ್ಯೆ ವಾಡಲು ಸಂಚು ರೂಪಿಸಿದ್ದ ಎನ್ನಲಾಗಿದೆ. ಹತ್ಯೆ ವಾಡಲು ಸಹಕರಿಸುವಂತೆ ಅಮೃತಾಳ ಸಹೋದರ ವರುಣ್ ಸಹಾಯ ಪಡೆದಿದ್ದ, ವರುಣ್ ತನ್ನ ಇಬ್ಬರು ಸ್ನೇಹಿತರ ಸಹಕಾರ ಪಡೆದಿದ್ದ. ಕೊಲೆಗೆ ದಿನೇಶ್ ಹಣ ನೀಡಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಕೊಲೆಯಾಗಿರುವ ದಿಲೀಪ್‌ಕುಮಾರ್ ಎರಡು ಮದುವೆ ಆಗಿದ್ದು, ಮೊದಲನೆ ಪತ್ನಿ ತೊರೆದು 4 ವರ್ಷದ ಹಿಂದೆ ಜಯಪುರದ ಅಮೃತಾ ಎಂಬುವರ ಜತೆ ಜೀವನ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net