ಎಂಡಿಎಂಎ ವಶ, ಇಬ್ಬರ ಬಂಧನ

Published on

ಪುತ್ತೂರು: ಮಾದ್ಯಕ ವಸ್ತು ಮಾರಾಟ ಮಾಡಿದ ಹಾಗೂ ಸೇವಿಸಿದ ಆರೋಪದ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣ ದಾಖಲಾಗಿದೆ.

ಕಬಕ ನಿವಾಸಿ ದ್ವಿಚಕ್ರ ಸವಾರ ಮೊಹಮ್ಮದ್ ಮುಸ್ತಾಫ್ (೩೪) ಬಂಽತ. ಪೋಳ್ಯದಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಪುತ್ತೂರು ಪೇಟೆ ಕಡೆಗೆ ಬರುತ್ತಿದ್ದ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಪರಿಶೀಲಿಸಿದಾಗ ನಿಷೇಽತ ಮಾದಕ ವಸ್ತು ಎಂಡಿಎಂಎ ಪತ್ತೆಯಾಗಿದೆ. ಮಾರಾಟ ಮಾಡುವ ಉದ್ದೇಶದಿಂದ ತೆರಳುತ್ತಿದ್ದಾಗಿ ತಪ್ಪೊಪ್ಪಿಕೊಂಡಿರುವುದಾಗಿ ದೂರಿನಲ್ಲಿ ಹೇಳಲಾಗಿದ್ದು, ಸುಮಾರು ೭.೬ಗ್ರಾಂ ಎಂ.ಡಿ.ಎಂ.ಎ. ಇದ್ದ ಬಗ್ಗೆ ಎನ್.ಡಿ.ಪಿ.ಎಸ್. ಕಾಯ್ದೆಯಲ್ಲಿ ಪ್ರಕರಣ ದಾಖಲಾಗಿದೆ.

ಆರ್ಯಾಪು ನಿವಾಸಿ ಶೈಲೇಶ್ (೨೮) ಬಂಽತ. ಬನ್ನೂರು ಚೆಲುವಮ್ಮನ ಕಟ್ಟೆಯಲ್ಲಿ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾತನನ್ನು ಪೊಲೀಸರು ಹಿಡಿದು ಈ ಸಂದರ್ಭದಲ್ಲಿ ಯಾವುದೋ ಮಾದಕವಸ್ತುವನ್ನು ಸೇವಿಸಿದವನಂತೆ ಕಂಡು ಬಂದಿದ್ದಾನೆ. ವಿಚಾರಿಸಿದಾಗ ಮಾದಕ ವಸ್ತು ಸೇವಿಸಿರುವುದಾಗಿ ಒಪ್ಪಿಕೊಂಡಿರುತ್ತಾನೆ. ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿ ಮಾದಕವಸ್ತು ಸೇವನೆ ಮಾಡಿರುವುದು ದೃಢಪಟ್ಟಿರುತ್ತದೆ ಎಂದು ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net