ಗ್ರಹಗಳ ಮೆರವಣಿಗೆ ವೀಕ್ಷಣೆಗೆ ವ್ಯವಸ್ಥೆ

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಬಾಹ್ಯಾಕಾಶದಲ್ಲಿ ಅಪರೂಪಕ್ಕೆ ಸಂಭವಿಸುವ ಗ್ರಹಗಳ ಮೆರವಣಿಗೆ ವೀಕ್ಷಣೆಗೆ ಧಾರವಾಡ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದ ವತಿಯಿಂದ ಜ. 23ರಂದು ಸಂಜೆ 7 ಗಂಟೆಗೆ ನಗರದ ಓಂ ಆಶ್ರಮದ ಬಳಿ ಸಾರ್ವಜನಿಕರಿಗೆ ದೂರದರ್ಶಕದ ವ್ಯವಸ್ಥೆ ಮಾಡಲಾಗಿದೆ.

ಎಲ್ಲರೂ ಈ ಅಪರೂಪದ ವಿಸ್ಮಯ ವೀಸಬಹುದು. ಶುಕ್ರ, ನೆಪ್ಚೊನ್​, ಬುಧ, ಗುರು, ಶನಿ, ಯುರೇನಸ್​ ಮತ್ತು ಮಂಗಳ ಗ್ರಹಗಳ ನಡುವಿನ ಅಂತರ ಕಡಿಮೆ ಆಗುವ ಕಾರಣಕ್ಕೆ ಮೆರವಣಿಗೆಯಂತೆ ಕಾಣುತ್ತವೆ. ಬರಿಗಣ್ಣಿನಲ್ಲಿ 5 ಗ್ರಹಗಳನ್ನು ಹಾಗೂ ಉಳಿದ ಗ್ರಹಗಳನ್ನು ದೂರದರ್ಶಕದ ಮೂಲಕ ವೀಕ್ಷಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net