

ಮಂಡ್ಯ: ನಗರದ ಡಾ.ರಾಜ್‌ಕುಮಾರ್ ಬಡಾವಣೆ ಪಕ್ಕದ ಮೈದಾನದಲ್ಲಿ ಆ.28ರಂದು ಕೃಷಿ ಇಲಾಖೆಯಿಂದ ರಾಜ್ಯಮಟ್ಟದ ಸಿರಿಧಾನ್ಯ ಮೇಳ, ವಸ್ತು ಪ್ರದರ್ಶನ ಮತ್ತು ಬೆಲ್ಲದ ಪರಿಷೆ ಕಾರ್ಯಕ್ರಮ ಹಾಗೂ ವಿವಿಧ ಸ್ಪರ್ಧೆ ಆಯೋಜಿಸಲಾಗಿದೆ.
ಸಿರಿಧಾನ್ಯ ಬಳಸಿ ರಂಗೋಲಿ ಸ್ಪರ್ಧೆಗೆ 18 ವರ್ಷ ಮೇಲ್ಪಟ್ಟವರು ಆ.25ರೊಳಗೆ ನೋಂದಣಿ ಮಾಡಿಕೊಳ್ಳಬಹುದ್ದು, ಆ.27ರ ಮಧ್ಯಾಹ್ನ 3 ಗಂಟೆಗೆ ಮೈದಾನದಲ್ಲಿ ಸ್ಪರ್ಧೆ ನಡೆಯಲಿದೆ. ಸಿರಿಧಾನ್ಯ ಪಾಕ ಸ್ಪರ್ಧೆಗೆ 18 ವರ್ಷ ಮೇಲ್ಪಟ್ಟವರು ಆ.25ರೊಳಗೆ ನೋಂದಣಿ ಮಾಡಿಕೊಳ್ಳಬಹುದಾಗಿದ್ದು, ಸ್ಪರ್ಧೆಯನ್ನು ಆ.26ರಂದು ಬೆಳಗ್ಗೆ 11 ಗಂಟೆಗೆ ವಿ.ಸಿ ಫಾರ್ಮ್‌ನ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿದೆ.
ಚಿಣ್ಣರ ಚಿತ್ರಕಲೆ ಸ್ಪರ್ಧೆಗೆ ‘ಕೃಷಿ ಸಂಸ್ಕರಣೆ’ ವಿಷಯ ಸಂಬಂಧಿಸಿದಂತೆ ಪ್ರೌಢಶಾಲಾ ವಿದ್ಯಾರ್ಥಿಗಳು ಹಾಗೂ ಪ್ರಬಂಧ ಸ್ಪರ್ಧೆ ‘ಮಂಡ್ಯಬೆಲ್ಲ’ ವಿಷಯಕ್ಕೆ ಸಂಬಂಧಿಸಿದಂತೆ ಪದವಿ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದ್ದು, ಆ.26ರ ಮಧ್ಯಾಹ್ನ 3 ರಿಂದ 4 ಗಂಟೆವರೆಗೆ ಪಿಇಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಸ್ಪರ್ಧೆ ನಡೆಯಲಿದೆ. ಮಾಹಿತಿಗಾಗಿ ಮೊ.ಸಂ 8277933687, 8277933611 ಅಥವಾ 8277933667 ಯನ್ನು ಸಂಪರ್ಕಿಸಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.