ಪೌರಕಾರ್ಮಿಕರಿಗೆ ಉಪಹಾರದ ವ್ಯವಸ್ಥೆ

upahara vevasthe
Published on

ಮಡಿಕೇರಿ: ಹ್ಯುಮಾನಿಟಿ ಫಸ್ಟ್ ಇಂಡಿಯಾ ಮಡಿಕೇರಿ, ಅಹಮದಿಯ ಮುಸ್ಲಿಂ ಜಮಾತಿನ(ಲಜ್ನಾಯಿಮಾ ಇಲ್ಲಹ್) ಮಹಿಳಾ ವಿಭಾಗ ಮಡಿಕೇರಿ ಇವರ ಸಹಯೋಗದೊಂದಿಗೆ ಮಡಿಕೇರಿಯಲ್ಲಿ ನಗರದ ಪೌರಕಾರ್ಮಿಕರಿಗೆ ಭಾನುವಾರದ ಬೆಳಗಿನ ಉಪಹಾರದ ವ್ಯವಸ್ಥೆ ಕಲ್ಪಿಸಲಾಯಿತು.

ಹ್ಯುಮಾನಿಟಿ ಫಸ್ಟ್ ಇಂಡಿಯಾದ ಸೌತ್ ಕರ್ನಾಟಕದ ಮುಖ್ಯಸ್ಥರಾದ ಮೊಹಮ್ಮದ್ ಶರೀಫ್ ಮಾತನಾಡಿ, ಅತ್ಯುತ್ತಮವಾಗಿ ಪೌರಕಾರ್ಮಿಕರು ಕೆಲಸ ಮಾಡುತ್ತಿರುವುದರಿಂದ ನಮ್ಮ ಮಡಿಕೇರಿ ನಗರವು ಸ್ವಚ್ಛವಾಗಿದೆ. ಮಡಿಕೇರಿ ನಗರ ಭಾರತದಲ್ಲಿ ಉತ್ತಮ ಗಾಳಿಯೊಂದಿಗೆ ಮೊದಲನೇ ಸ್ಥಾನಕ್ಕೆ ಬರಲು ಪೌರಕಾರ್ಮಿಕರು ನಗರವನ್ನು ಸ್ವಚ್ಛವಾಗಿ ಇಟ್ಟಿರುವುದೂ ಒಂದು ಕಾರಣ. ಈ ಹಿನ್ನೆಲೆ ಬೆಳಗಿನ ಉಪಹಾರದ ವ್ಯವಸ್ಥೆ ಕಲ್ಪಿಸಿರುವುದಾಗಿ ತಿಳಿಸಿದರು.

ಈ ಸಂದರ್ಭ ನಗರದಸಭೆ ಪೌರಾಯುಕ್ತರಾದ ರಮೇಶ್, ಅಹಮದಿಯ ಮುಸ್ಲಿಂ ಜಮಾತಿನ ಉಪಾಧ್ಯಕ್ಷ ಎಂ.ಬಿ.ಜಹೀರ್ ಅಹ್ಮದ್, ಆರೋಗ್ಯ ಅಧಿಕಾರಿ ರಂಗಪ್ಪ, ಹ್ಯುಮಾನಿಟಿ ಫಸ್ಟ್‌ನ ಬಶೀರ್ ಅಹಮದ್, ಎಂ.ಯು.ಉಸ್ಮಾನ್, ಅಬ್ದುಲ್ ಸಾಜಿದ್, ಜೆ.ಎಂ.ನಾಸಿರ್, ಎಂ.ಎಂ.ತಾಹಿರ್, ಗೌತಮ್, ಕಧೀರ್, ಸಫಲ್ ಹಾಗೂ ಇತರ ಕಾರ್ಯಕರ್ತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net