ಶನೈಶ್ಚರ ದೇವಾಲಯಕ್ಕೆ ಸುತ್ತೂರು ಶ್ರೀ ಭೇಟಿ

31Kush03
Published on


ಮಡಿಕೇರಿ: ಕುಶಾಲನಗರದ ಕೂಡಿಗೆ ಸಮೀಪದ ಹೆಗ್ಗಡಹಳ್ಳಿ ಗ್ರಾಮದಲ್ಲಿರುವ ಶನೈಶ್ಚರ ದೇವಾಲಯಕ್ಕೆ ಮೈಸೂರು ಜಿಲ್ಲೆ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಬುಧವಾರ ಭೇಟಿ ನೀಡಿ ದೇವಾಲಯದ ಧರ್ಮದರ್ಶಿ ಯಲಮ್ಮಬಾಯಿ ಅವರ ಕುಶಲೋಪರಿ ವಿಚಾರಿಸಿದರು.


ಈ ವೇಳೆ ಸುತ್ತೂರು ಮಠದ ಸ್ವಾಮೀಜಿಗಳಿಗೆ ಧರ್ಮದರ್ಶಿ ಯಲ್ಲಮ್ಮಬಾಯಿ ಮೊಮ್ಮಗ ಸುನೀಲ್ ಫಲತಂಬೂಲ ನೀಡಿ ಪಾದಪೂಜೆ ನೆರವೇರಿಸಿದರು.
ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಈ ಕ್ಷೇತ್ರಕ್ಕೆ ಭೇಟಿ ನೀಡಿ, ಹಿರಿಯ ಜೀವ ಧರ್ಮದರ್ಶಿ ಯಲ್ಲಮ್ಮಬಾಯಿ ಅವರ ಆರೋಗ್ಯ ವಿಚಾರಿಸಿದೆ.

ಕ್ಷೇತ್ರವನ್ನು ಉದ್ಧಾರ ಮಾಡಿದ್ದಾರೆ. ಇಲ್ಲಿಗೆ ಬರುವ ಭಕ್ತಾದಿಗಳು ಬಹಳ ನಂಬಿಕೆ ಇಟ್ಟು ಬರುವುದನ್ನು ಕೇಳಿದ್ದೇನೆ. ಎಲ್ಲರಿಗೂ ಸನ್ಮಂಗಳವನ್ನು ಉಂಟುಮಾಡಲಿ ಎಂದು ಆಶಿಸುತ್ತೇನೆ ಎಂದರು.


ವಿರಾಜಪೇಟೆ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ತೊರೆನೂರು ಮಠದ ಮಲ್ಲೇಶ ಸ್ವಾಮೀಜಿ, ಜಿ.ಪಂ. ಶಿಕ್ಷಣ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ವಿ.ಪಿ.ಶಶಿಧರ್, ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯ ಅರುಣ್ ರಾವ್, ಕುಶಾಲನಗರದ ಉದ್ಯಮಿ ವಿ.ವಿ.ತಿಲಕ್, ಪ್ರಭಾತ್, ಕುಶಾಲನಗರ ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್.ನಾಗೇಶ್, ಸುಳ್ಯದ ಉದ್ಯಮಿ ಪ್ರಸಾದ್, ದೇವಾಲಯದ ಅರ್ಚಕ ವೃಂದದವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net