ಸರ್ಕಾರಿ ಭೂಮಿ ಕಬಳಿಕೆ ಆರೋಪ

21 skpp 1
Published on

ಸಕಲೇಶಪುರ: ತಾಲೂಕಿನ ಹುಲ್ಲೆಮನೆ ಗ್ರಾಮದಲ್ಲಿ ಸರ್ಕಾರಿ ಭೂಮಿ ವ್ಯವಸ್ಥಿತವಾಗಿ ಕಬಳಿಕೆ ಮಾಡಲಾಗುತ್ತಿದೆ ಎಂದು ಹಾನುಬಾಳ್ ಗ್ರಾ.ಪಂ. ಸದಸ್ಯ ಯೋಗೇಶ್ ಆರೋಪಿಸಿದ್ದಾರೆ.

ಹುಲ್ಲೆಮನೆ,ಮದನಾಪುರ ಹಾಗೂ ಮರಹಾದಿಗೆ ಗ್ರಾಮದಲ್ಲಿ ನೂರಕ್ಕೂ ಅಧಿಕ ಹಿಂದುಳಿದ ವರ್ಗದ ಕುಟುಂಬಗಳಿವೆ. ಇದರಲ್ಲಿ 25 ಕ್ಕೂ ಅಧಿಕ ಕುಟುಂಬಗಳು ವಸತಿ ರಹಿತವಾಗಿವೆ. ಇವರಿಗೆ ನಿವೇಶನ ಕೊಡಿಸುವ ಉದ್ದೇಶದಿಂದ ಗ್ರಾಮಸ್ಥರ ತಂಡ ಹೋರಾಟ ಮಾಡುತ್ತಿದೆ. ಆದರೆ ಗ್ರಾಮದ ಕೆಲವು ವ್ಯಕ್ತಿಗಳು ಪ್ರಭಾವಿ ವ್ಯಕ್ತಿಗಳನ್ನು ಬಳಸಿಕೊಂಡು ಸರ್ಕಾರಿ ಭೂಮಿಗೆ ಬೇಲಿ ನಿರ್ಮಿಸುವ ಮೂಲಕ ಭೂ ಕಬಳಿಕೆ ನಡೆಸುತ್ತಿದ್ದಾರೆ ಎಂದವರು ಸುದ್ದಿಗೋಷ್ಠಿಯಲ್ಲಿ ದೂರಿದರು.

ಇತ್ತೀಚೆಗೆ ಗ್ರಾಮದಲ್ಲಿ ನಿವೃತ್ತ ಉಪಾಧ್ಯಾಯರೊಬ್ಬರಿಗೆ ಒಂದು ಎಕರೆ ಜಮೀನು ಮಾರಾಟ ಮಾಡಿರುವ ವ್ಯಕ್ತಿಗಳು ಹತ್ತಾರು ಎಕರೆ ಸರ್ಕಾರಿ ಭೂಮಿಗೆ ಬೇಲಿ ಹಾಕಿಸುವ ಕೆಲಸ ಮಾಡಿದ್ದಾರೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಸರ್ಕಾರಿ ಉದ್ದೇಶದ ಕಟ್ಟಡ ನಿರ್ಮಾಣಕ್ಕಾಗಲಿ, ನಿವೇಶನ ರಹಿತರಿಗೆ ನಿವೇಶನ ಹಂಚಲು ಭೂಮಿ ಇಲ್ಲದಂತಾಗಿದೆ.

ಆದ್ದರಿಂದ ಕೂಡಲೇ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಮಿಸಿ ಒತ್ತುವರಿ ಭೂಮಿ ತೆರವುಗೊಳಿಸ ಬೇಕು ಹಾಗೂ ನಿಜವಾದ ನಿವೇಶನ ರಹಿತರನ್ನು ಗುರುತಿಸಿ ನಿವೇಶನ ಹಂಚಲು ಸಹಕರಿಸ ಬೇಕು ಎಂದು ಒತ್ತಾಯಿಸಿದರು.

ಮುಖಂಡ ಲಕ್ಷಣ್ ಮಾತನಾಡಿ, ಗ್ರಾಮಸ್ಥರ ಮೇಲೆ ವಿನಾಕರಣ ಸಲ್ಲದ ಆರೋಪಮಾಡುತ್ತಿರುವ ವ್ಯಕ್ತಿಗಳು ನಿಜವಾದ ಭೂ ಕಬಳಿಕೆದಾರರು ಗ್ರಾಮಕ್ಕೆ ಭೇಟಿ ನೀಡುವ ಕಂದಾಯ ಅಧಿಕಾರಿಗಳು ವಾಸ್ತವ ಅರಿತು ನ್ಯಾಯನೀಡ ಬೇಕು ಎಂದರು. ಮುಖಂಡರಾದ ಎಂ.ಜಿ ರವಿ,ಪ್ರಕಾಶ್,ರಮೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net