ಸರ್ಕಾರಿ ಸೇವೆಗಳ ಸಮರ್ಪಕ ಬಳಕೆ - ಶಾಸಕ ಅಶೋಕ್ ರೈ ಹೇಳಿಕೆ - ಆರೋಗ್ಯ ಕ್ಷೇಮ ಕೇಂದ್ರ ಉದ್ಘಾಟನೆ

PTR_9 JUL_2
Published on


ಪುತ್ತೂರು: ಜೀವನದಲ್ಲಿ ಆರೋಗ್ಯ ಬಹಳಷ್ಟು ಪ್ರಾಮುಖ್ಯ ಪಡೆದುಕೊಂಡಿದ್ದು, ಪ್ರತಿಯೊಬ್ಬರೂ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕಾಗಿದೆ. ಸರ್ಕಾರಿ ಆಸ್ಪತ್ರೆಗೆ ಹೋದಾಗ ಎಲ್ಲವನ್ನೂ ಕೇಳುವವರು, ಖಾಸಗಿ ಆಸ್ಪತ್ರೆಯಲ್ಲಿ ಇರುವುದಕ್ಕೆ ಹೊಂದಾಣಿಕೆ ಮಾಡುತ್ತಿದ್ದೇವೆ. ಕ್ಯಾನ್ಸರ್‌ನಿಂದ ಬಳಲುತ್ತಿರುವವರಿಗೆ ಸರ್ಕಾರ ೫ ಲಕ್ಷ ಸಹಾಯಧನ ನೀಡುತ್ತಿದ್ದು, ಸರ್ಕಾರ ನೀಡುವ ಸೇವೆಗಳನ್ನು ಜನರು ಬಳಸಿಕೊಳ್ಳಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ಮಂಗಳವಾರ ಬನ್ನೂರು ಕಜೆ ಜಂಕ್ಷನ್‌ನಲ್ಲಿರುವ ಸೇಡಿಯಾಪು ಕಜೆ ಜನರಲ್ ಸ್ಟೋರ್‌ನಲ್ಲಿ ನೂತನವಾಗಿ ನಿರ್ಮಾಣವಾದ ಆರೋಗ್ಯ ಮತ್ತು ಕ್ಷೇಮ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.


ತಾಲೂಕು ಆರೋಗ್ಯಾಽಕಾರಿ ಡಾ. ದೀಪಕ್ ರೈ ಮಾತನಾಡಿ ಆರೋಗ್ಯ ಕ್ಷೇಮ ಕೇಂದ್ರದಲ್ಲಿ ಗರ್ಭಿಣಿಯರಿಗೆ ಹಾಗೂ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಜತೆಗೆ ಅಸಾಂಕ್ರಾಮಿಕ ರೋಗಗಳ ಸ್ಕ್ರೀನಿಂಗ್ ವ್ಯವಸ್ಥೆಯನ್ನು ಇಲ್ಲಿ ಕಲ್ಪಿಸಲಾಗಿದೆ. ಜನರು ಉತ್ತಮ ರೀತಿಯಲ್ಲಿ ಈ ಸೇವೆಯನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.


ಆರೋಗ್ಯ ಕ್ಷೇಮ ಕೇಂದ್ರಕ್ಕೆ ಸ್ವಂತ ಜಮೀನು ಮೀಸಲಿಡಬೇಕು ಮತ್ತು ಕೇಂದ್ರಕ್ಕೆ ವೈದ್ಯಾಽಕಾರಿಯನ್ನು ನೇಮಕಗೊಳಿಸಬೇಕೆಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರತ್ನಾಕರ ಪ್ರಭು ಮನವಿ ಮಾಡಿದರು. ಅಧ್ಯಕ್ಷತೆಯನ್ನು ಬನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ಮೀತಾ ವಹಿಸಿದ್ದರು.


ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಡಾ. ಕೃಷ್ಣಾನಂದ, ಗ್ರಾಮ ಪಂಚಾಯಿತಿ ಸದಸ್ಯರಾದ ಶೀನಪ್ಪ ಕುಲಾಲ್, ಸುಪ್ರಿತಾ ರತ್ನಾಕರ ಪ್ರಭು, ಪಂಚಾಯಿತಿ ಅಭಿವೃದ್ಧಿ ಅಽಕಾರಿ ಚಿತ್ರವಾತಿ, ಕಟ್ಟಡ ಮಾಲೀಕ ತಿಮ್ಮಣ್ಣ ಕಜೆ, ಪ್ರಾರ್ಥಮಿಕ ಆರೋಗ್ಯ ಕೇಂದ್ರದ ಸಹಾಯಕಿರಾದ ಜಯಂತಿ, ದಮಯಂತಿ, ಆರೋಗ್ಯ ಕ್ಷೇಮ ಕೇಂದ್ರ ವೈದ್ಯಾಽಕಾರಿ ಸೌಮ್ಯ, ಆಶಾ ಕಾರ್ಯಕರ್ತೆ ಕುಸುಮ, ಉದ್ಯಮಿ ಡೆನ್ನಿಸ್ ಮಸ್ಕರೇನಸ್, ಅಂಗನವಾಡಿ ಕಾರ್ಯಕರ್ತೆ ರೇಖಾ ಡಿ. ಎಸ್. ಉಪಸ್ಥಿತರಿದ್ದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಸವಲತ್ತುಗಳು ಜನರಿಗೆ ಸಿಗುತ್ತಿವೆ. ಆರೋಗ್ಯ ಕ್ಷೇಮ ಕೇಂದ್ರವನ್ನು ಮುಂದಿನ ದಿನದಲ್ಲಿ ನಮ್ಮ ಕ್ಲಿನಿಕ್ ಆಗಿ ಪರಿವರ್ತನೆ ಮಾಡುವುದರಿಂದ ಇನ್ನೂ ಹೆಚ್ಚಿನ ವ್ಯವಸ್ಥೆಗಳನ್ನು ಜನರಿಗೆ ನೀಡಬಹುದಾಗಿದೆ. ಉಪ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವುದಾ ಅಗತ್ಯ ಬೇಕಾದಲ್ಲಿಗೆ ಕೇಂದ್ರವನ್ನು ನೀಡುವುದಾ ಎಂಬ ಬಗ್ಗೆ ತಾಲೂಕು ಆರೋಗ್ಯಾಽಕಾರಿಗಳು ಚಿಂತನೆ ನಡೆಸಬೇಕಾಗಿದೆ. ದೂರದಿಂದ ನಗರಗಳಿಗೆ ಬರುವ ಬದಲು ಅಲ್ಲೇ ವೈದ್ಯರು ಸಿಗುವ ರೀತಿಯಾದಾಗ ಪ್ರಯೋಜನಗಳು ಹೆಚ್ಚಾಗುತ್ತವೆ.

| ಅಶೋಕ್ ಕುಮಾರ್ ರೈ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net