

ಆಲಮಟ್ಟಿ: ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮುಂಗಾರು ವರ್ಷಕ್ಕಿಂತ ಮುಂಚಿತವಾಗಿ ಕಾಲಿಟ್ಟಿರುವುದರಿಂದ ಪ್ರಕೃತಿ ವಿಕೋಪ ಸಂಭವಿಸುವ ಜನವಸತಿ ಸ್ಥಳಗಳಿಗೆ ಸೇನಾ ಅಧಿಕಾರಿಗಳಾದ ಅಭಯ ಯಾದವ ಮತ್ತು ಸಂಜೀವ ಬುಧವಾರ ಭೇಟಿ ನೀಡಿ ಪರಿಸೀಲಿಸಿದರು.
ಜಲಾಶಯ ಮತ್ತು ಜಲಾಶಯದ ಮುಂಭಾಗದಲ್ಲಿರುವ ಗ್ರಾಮಗಳಾದ ಅರಳಲದಿನ್ನಿ, ಯಲಗೂರ, ಕಾಸಿನಕುಂಟಿ, ಯ.ಬೂದಿಹಾಳ, ಹೊಳೆಮಸೂತಿಗೆ ಭೇಟಿ ನೀಡಿ ತಹಸೀಲ್ದಾರ್ ಎ.ಡಿ. ಅಮರಾವದಗಿ ಅವರಿಂದ ಮಾಹಿತಿ ಪಡೆದರು.
ಪ್ರಕೃತಿ ವಿಕೋಪ ಸಂಭವಿಸಿದರೆ ಸಮೀಪದ ಆರೋಗ್ಯ ಕೇಂದ್ರಗಳು, ಆಲಮಟ್ಟಿಯ ಹೆಲಿಪ್ಯಾಡ್, ಗಂಜಿಕೇಂದ್ರಗಳು, ಸಂತ್ರಸ್ತರನ್ನು ಇರಿಸುವ ಸರ್ಕಾರಿ ಶಾಲೆಗಳನ್ನು ಪರಿವೀಕ್ಷಿಸಿದರು.
ಕಂದಾಯ ನಿರೀಕ್ಷಕ ಸಲೀಮ್ ಯಲಗೋಡ, ಗ್ರಾಮ ಆಡಳಿತಾಧಿಕಾರಿ ನಾನಾಗೌಡ ಪಾಟೀಲ, ವಿಠಲ ಮುತ್ತಣ್ಣವರ, ಬೊಮ್ಮಣ್ಣ ಕೋಲಕಾರ, ಬಸಪ್ಪ ಮುತ್ತಣ್ಣವರ, ಶ್ರೀಶೈಲ ಮೊಕಾಶಿ ಇತರರಿದ್ದರು.