ಸೇನಾನಿಗಳ ನಾಡಿನಲ್ಲೀಗ ಸೈನಿಕರಿಗೆ ಬರ

31mdk01
Published on

ಮಡಿಕೇರಿ:

ಕೊಡಗು ಸೇನಾನಿಗಳ ನಾಡು ಎನ್ನುವ ಹೆಗ್ಗಳಿಕೆ ಪಡೆದುಕೊಂಡಿದೆ. ಫೀ.ಮಾ. ಕಾರ್ಯಪ್ಪ, ಜ. ತಿಮ್ಮಯ್ಯರಂತಹ ಕಲಿಗಳನ್ನು ಸೇನೆಗೆ ಕೊಟ್ಟಿರುವ ಹೆಮ್ಮೆ ಕೊಡಗಿನದ್ದು. ಸಾಮಾನ್ಯವಾಗಿ ಮನೆಗೆ ಒಬ್ಬ ವ್ಯಕ್ತಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುತ್ತಾನೆ ಎನ್ನುವುದು ಇಲ್ಲಿಯ ಪ್ರತೀತಿ. ದೇಶ ಸೇವೆ, ಶೌರ್ಯಕ್ಕೆ ಜಿಲ್ಲೆ ಹೆಸರು ಮಾಡಿದೆ.

ಪಂಜಾಬ್ ಹೊರತುಪಡಿಸಿದರೆ ಅತ್ಯಧಿಕ ಸಂಖ್ಯೆಯಲ್ಲಿ ಯೋಧರನ್ನು ಕೊಡಗು ನೀಡಿದೆ. ಸೇನೆಗೆ ಮಕ್ಕಳನ್ನು ಕಳುಹಿಸುವುದೆಂದರೆ ಪೋ?ಕರಿಗೆ ಅದೊಂದು ಪ್ರತಿ?್ಠೆ ಮತ್ತು ಹೆಮ್ಮೆಯ ವಿ?ಯ. ಕೊಡಗಿನ ಮನೆಗಳಲ್ಲಿ ದೇಶ ರಕ್ಷಣೆಯ ಬಗ್ಗೆ ಒಂದಿಲ್ಲೊಂದು ವೀರತೆಯ ಕಥೆಗಳು ಕೇಳಿಬರುತ್ತವೆ.

ಆದರೆ ಈಗ ಕಾಲ ಬದಲಾಗಿದೆ. ಇತ್ತೀಚಿನ ವ?ರ್ಗಳಲ್ಲಿ ಕೊಡಗಿನಿಂದ ಸೇನೆಗೆ ಸೇರುವವರ ಸಂಖ್ಯೆ ಕಡಿಮೆ ಆಗುತ್ತಿದೆ ಎನ್ನುವ ಮಾತಿದೆ. ಆಧುನೀಕತೆ, ಜಾಗತೀಕರಣದ ಪ್ರಭಾವವೂ ಇದಕ್ಕೆ ಕಾರಣ ಆಗಿರಬಹುದು ಎನ್ನುವ ವಿಶ್ಲೇ?ಣೆ ಕೇಳಿಬರುತ್ತಿದೆ.
ಸೇನೆಗೆ ಆಯ್ಕೆ ಪ್ರಕ್ರಿಯೆ ನಡೆಯುವ ಸಂದರ್ಭದಲ್ಲಿ ಕೊಡಗಿನ ಹುಡುಗರ ಹಾಜರಾತಿ ಪ್ರಮಾಣ ಕಡಿಮೆ ಕಂಡು ಬರುತ್ತಿದೆ. ಆಯ್ಕೆ ಶಿಬಿರಕ್ಕೆ ಹಾಜರಾದವರಲ್ಲಿ ಬಹುತೇಕರು ಸೇನೆಗೆ ಆಯ್ಕೆ ಕೂಡ ಆಗುತ್ತ್ತಿಲ್ಲ. ದೈಹಿಕ ಸದೃಡತೆ ಕಡಿಮೆ ಆಗುತ್ತಿರುವುದು ಕಂಡುಬರುತ್ತಿದೆ.
ಐಟಿ ಉದ್ಯೋಗ, ಸ್ಥಳೀಯವಾಗಿ ಲಭ್ಯವಿರುವ ಉನ್ನತ ವಿದ್ಯಾಭ್ಯಾಸದ ಅವಕಾಶ, ಶ್ರಮವಿಲ್ಲದ ಸುಖಿ ಜೀವನದ ಪರಿಕಲ್ಪನೆ ಹೀಗೆ ಹಲವು ಕಾರಣಗಳು ಸೇನೆ ಬಗೆಗೆ ಯುವಕರ ತುಡಿತ ಕಡಿಮೆ ಮಾಡಿರಬಹುದು ಎನ್ನುವ ಮಾತುಗಳು ಕೂಡ ಕೇಳಿಬರುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ವಿಜಯವಾಣಿ ಓದುಗರು ಹಂಚಿಕೊಂಡಿರುವ ಅಭಿಪ್ರಾಯಗಳು ಇಲ್ಲಿದೆ.

ಹೆಚ್ಚಿನ ಯುವಜನತೆಯಲ್ಲಿ ತಾಳ್ಮೆ ಮತ್ತು ರಿಸ್ಕ್ ತೆಗೆದುಕೊಳ್ಳುವಂಥ ಮನೋಭಾವ ಕಡಿಮೆಯಾಗುತ್ತಿದೆ. ದೈಹಿಕ ಶ್ರಮದ ಕೆಲಸಗಳನ್ನು ಇ?್ಟಪಡದೆ, ಕಂಪ್ಯೂಟರ್ ಪರದೆ ಮುಂದೆ ಕುಳಿತು ಕೆಲಸ ಮಾಡುವತ್ತ ಒಲವು ತೋರುತ್ತಿದ್ದಾರೆ. ಸೇನೆಯ ಕುರಿತು ಸೂಕ್ತ ಮಾಹಿತಿಯ ಕೊರತೆ ಇದೆ. ಶಾಲಾ- ಕಾಲೇಜು ಹಂತದಲ್ಲಿಯೇ ವಿದ್ಯಾರ್ಥಿಗಳಲ್ಲಿ ದೇಶಾಭಿಮಾನ ಬೆಳೆಸುವ ವೈವಿಧ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಸೇನೆಗೆ ಸೇರಲು ಆಸಕ್ತರಾಗಿರುವವರಿಗೆ ಪರೀಕ್ಷೆ ಎದುರಿಸಲು ಅನುಕೂಲವಾಗುವಂತೆ ಕೊಡಗಿನ ಒಳಗಡೆಯೇ ಉತ್ತಮ ಕೋಚಿಂಗ್ ಸಿಗುವಂತಾಗಬೇಕು.

  • ಲೀಲಾಕುಮಾರಿ ತೊಡಿಕಾನ, ಉಪನ್ಯಾಸಕಿ, ಕುಶಾಲನಗರ
  • ಇಂಗ್ಲಿ?್ ಶಿಕ್ಷಣದ ಕ್ರಾಂತಿಯೂ ಸೇನೆಗೆ ಸೇರುವ ಆಸಕ್ತಿ ಕಡಿಮೆ ಆಗಲು ಒಂದು ಕಾರಣ ಎನ್ನಬಹುದು. ಹಿಂದೆ ಅವಿಭಕ್ತ ಕುಟುಂಬಗಳಲ್ಲಿ ೮-೧೦ ಮಕ್ಕಳಿರುತ್ತಿದ್ದರು. ಇಂದು ಪ್ರತಿ ಮನೆಯಲ್ಲಿ ಒಂದೇ ಮಗು. ಆ ಮಗುವಿಗೆ ಇಂಜಿನಿಯರ್ ಅಥವಾ ವೈದ್ಯಕೀಯ ಶಿಕ್ಷಣಕ್ಕೆ ಮೊದಲ ಆದ್ಯತೆ ಸಿಗುತ್ತಿದೆ. ಸೈನ್ಯಕ್ಕೆ ಬೇಕಾದಂತಹ ಸದೃಢ ಆರೋಗ್ಯದ ಕೊರತೆಯೂ ಕಾರಣ ಆಗಿರಬಹುದು. ಈಗಾಗಲೇ ನಮ್ಮ ಮಾಜಿ ಸೈನಿಕರು ಸೈನ್ಯದಲ್ಲಿ ಪಟ್ಟ ಕ?್ಟಗಳು ಮಕ್ಕಳಿಗೆ ಬೇಡ ಅನ್ನುವ ಮನಸ್ಥಿತಿಯೂ ಇರಬಹುದು. ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಯುಜನಾಂಗ ಸೇನೆ ಬಗ್ಗೆ ಸಂಪೂರ್ಣ ಆಸಕ್ತಿ ಕಳೆದುಕೊಳ್ಳುವ ಅವಕಾಶ ಇಲ್ಲದಿಲ್ಲ.
  • ಡಿಂಪ ಅಯ್ಯೆಟ್ಟಿ, ಮರಂದೋಡ

ಪ್ರಾಥಮಿಕವಾಗಿ ಪೋಷಕರು ಮತ್ತು ಶಿಕ್ಷಕರು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಮತ್ತು ಸೇನೆಯ ಬಗ್ಗೆ ಒಲವು ಮೂಡುವಂತೆ ಪ್ರರೇಪಿಸಬೇಕು. ಮಕ್ಕಳ ದೈಹಿಕ ಶಿಕ್ಷಣ ಮತ್ತು ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ಕೊಟ್ಟು ಮಕ್ಕಳನ್ನು ದೈಹಿಕವಾಗಿ ಸದೃಢರಾಗುವಂತೆ ನೋಡಿಕೊಳ್ಳಬೇಕು. ಎನ್‌ಸಿಸಿ ಮತ್ತಿತರ ಶಿಸ್ತಿನ ಶಿಕ್ಷಣ ನೀಡುವಂತಾಗಬೇಕು. ಸೇನೆಗೆ ಸೇರುವುದಕ್ಕೆ ಸಂಬಂಧಿಸಿದ ದೈಹಿಕ ಮತ್ತು ಮಾನಸಿಕ ಪರೀಕ್ಷೆಗಳ ತಯಾರಿಗೆ ತರಬೇತಿ ಕೊಡಬೇಕು.

  • ಕೇಟೋಳಿರ ಡಾಲಿ ಅಚ್ಚಪ್ಪ, ಮಾಜಿ ಸೈನಿಕ, ಕ್ರೀಡಾ ತರಬೇತುದಾರ, ನಾಪೋಕ್ಲು.
  • ಸೇನೆಗೆ ಸೇರುವ ಆಸಕ್ತಿ ಎಲ್ಲರಿಗೂ ಇದೆ. ಆದರೆ ಸೇರ ಬಯಸುವ ಅಭ್ಯರ್ಥಿಗಳು ದೇಹ ದೃಢ ಪಡಿಸಿಕೊಂಡಿರುವುದಿಲ್ಲ. ಶ್ರಮ ಪಟ್ಟು ದುಡಿಯುತ್ತಿಲ್ಲ. ಬೆಳಗ್ಗೆ ಬೇಗ ಎದ್ದೇಳದೆ ನಿದ್ರಿಸುತ್ತಾರೆ. ಇದನ್ನೆಲ್ಲಾ ಬದಲಾವಣೆ ಮಾಡಿಕೊಳ್ಳಬೇಕು. ತಮ್ಮ ಅರೋಗ್ಯ ಕಾಪಾಡಿಕೊಂಡು ಬರಬೇಕು. ಸೇನೆಗೆ ಸೇರಬಯಸುವವರು ಸೈನ್ಯಕ್ಕೆ ಸೇರಿರುವವರ ಸಲಹೆ ಪಡೆಯಬೇಕು.
  • ಎಸ್. ಎನ್. ಪಾಂಡು. ನಿವೃತ್ತ ಸೈನಿಕರ ಸಂಘದ ಕಾರ್ಯದರ್ಶಿ, ಶನಿವಾರಸಂತೆ
  • ಸೈನ್ಯಕ್ಕೆ ಸೇರಲು ಆಸಕ್ತಿ ಎಲ್ಲರಿಗೂ ಇದೆ. ಆದರೆ ಸರಿಯಾದ ಮಾರ್ಗದರ್ಶನ ಸಿಗದೆ ಕೆಲವರು ರಿಜೆಕ್ಟ್ ಆಗುತ್ತಿದ್ದಾರೆ. ವಿದ್ಯಾರ್ಹತೆ ಇದ್ದರೂ ಮೆಡಿಕಲ್ ಪರೀಕ್ಷೆಯಲ್ಲಿ ಪಾಸಾಗುತ್ತಿಲ್ಲ. ಅರೋಗ್ಯ ಕಾಪಾಡಿಕೊಂಡು ಬರಬೇಕು. ಈ ಹಿಂದೆ ನಾವೆಲ್ಲ ಶಾಲಾಕಾಲೇಜುಗಳಿಗೆ ಕಿಲೋಮೀಟರ್‌ಗಟ್ಟಲೆ ನಡೆದು ಸಾಗುತಿದ್ದೆವು. ಆದರೆ ಇಂದು ನಡೆಯುವುದನ್ನು ನಿಲ್ಲಿಸಿದ್ದಾರೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರಿ ಸೈನ್ಯಕ್ಕೆ ಸೇರಲು ಸಾಧ್ಯವಾಗುತ್ತಿಲ್ಲ. ಸೈನ್ಯಕ್ಕೆ ಸೇರಲು ಬಯಸುವವರು ತಮ್ಮ ಹವ್ಯಾಸ ಬದಲಾವಣೆ ಮಾಡಿಕೊಳ್ಳಬೇಕು.
  • ಚಂದ್ರಪ್ಪ. ನಿವೃತ್ತ ಸೈನಿಕರ ಸಂಘದ ಸದಸ್ಯ, ಶನಿವಾರಸಂತೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net