ಬೆಳಗಾವಿಯಿಂದ ನಿತ್ಯ ಹಾರಲಿದೆ ಇಂಡಿಗೋ ವಿಮಾನ : ಸಂಸದ ಶ ಜಗದೀಶ ಶೆಟ್ಟರ

65af76d2274f94ffc7f1fd2b_Indigo_a320_2400px-1.webp
Published on

ಬೆಳಗಾವಿ: ಬೆಳಗಾವಿ - ದೆಹಲಿ ಮತ್ತು ಬೆಂಗಳೂರು - ಬೆಳಗಾವಿ ನಡುವೆ ಬರುವ 16 ಸೆಪ್ಟೆಂಬರ್ 2025 ರಂದು ಮತ್ತು 21 ಸೆಪ್ಟೆಂಬರ್ 2025 ರಂದು ಇಂಡಿಗೋ ವಿಮಾನ ಎಂದಿನಂತೆ ದಿನನಿತ್ಯದ ಸಂಚಾರ ಆರಂಭಿಸಲಿದೆ ಎಂದು ಸಂಸದ ಜಗದೀಶ್ ಶೆಟ್ಟರ್ ಇವರು ತಿಳಿಸಿದ್ದಾರೆ.

ಕೆಲವು ದಿನಗಳಿಂದ ಇಂಡಿಗೋ ಬೆಳಗಾವಿ - ದೆಹಲಿ ನಡುವಿನ ತನ್ನ ಸಂಚಾರವನ್ನು ಎರಡು ದಿನಗಳಿಗೊಮ್ಮೆ ನಡೆಸುತ್ತಿತ್ತು ಮತ್ತು ಬೆಂಗಳೂರು - ಬೆಳಗಾವಿ ನಡುವೆ ಬೆಳಗಿನ ಸಂಚಾರವನ್ನು ರದ್ದು ಮಾಡಲಾಗಿದ್ದು ಇಲ್ಲಿ ಸ್ಮರಣಿಯ.

ಇಂಡಿಗೋ ವಿಮಾನಯನ ಅಧಿಕಾರಯೊಂದಿಗೆ ಸಭೆ ನಡೆಸಿ, ಒತ್ತಾಯ ಮಾಡಿ, ಈ ಕ್ರಮ ಜರುಗಿಸಿದ ಬಗ್ಗೆ ಸಂಸದರಾದ ಶ್ರೀ ಜಗದೀಶ ಶೆಟ್ಟರ್ ತಮ್ಮ ಸಂತಸ ವ್ಯಕ್ತ ಪಡಿಸಿದ್ದು, ಇಂಡಿಗೋ ವಿಮಾನಯಾನ ಅಧಿಕಾರಿಗಳಿಗೆ ತಮ್ಮ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net