

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಶ್ರೀ ಜಗದ್ಗುರು ಅಯ್ಯ ಸ್ವಾಮಿ ಮಠ ಆಲಂಗಾರು ಮೂಡುಬಿದಿರೆ ಪುನಃ ನಿರ್ಮಾಣ ಜೀರ್ಣೋದ್ಧಾರ ಪ್ರಯುಕ್ತ ನಡೆದ ಶ್ರೀ ಗುರು ಮತ್ತು ವಿಶ್ವಕರ್ಮ ಯಜ್ಞ ಸಂದರ್ಭ ಆಲಂಗಾರಿನ ಪಾಲ್ಕೆ ಬಾಬುರಾಯ ಆಚಾರ್ಯ ವೇದಿಕೆಯಲ್ಲಿ ಗೇರುಕಟ್ಟೆ ಅರ್ಕುಳ ಸುಬ್ರಾಯ ಆಚಾರ್ಯ ಪ್ರತಿಷ್ಠಾನದಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಡಗುತಿಟ್ಟಿನ ಕಲಾವಿದ ತೀರ್ಥಹಳ್ಳಿ ಗೋಪಾಲ ಆಚಾರ್ಯ ಅವರಿಗೆ ಅರ್ಕುಳ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಠದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎನ್.ಕೇಶವತಂತ್ರಿ ಅಂಕಸಾಲೆ ಅಧ್ಯಕ್ಷತೆ ವಹಿಸಿದ್ದರು. ಅರ್ಕುಳ ಪ್ರಶಸ್ತಿ ಸ್ವೀಕರಿಸಿದ ತೀರ್ಥಹಳ್ಳಿ ಗೋಪಾಲಾಚಾರ್ಯ, ಅರ್ಕುಳ ಪ್ರತಿಷ್ಠಾನದ ಸಂಚಾಲಕ ದಿವಾಕರ ಆಚಾರ್ಯ ಗೇರುಕಟ್ಟೆ ಮಾತನಾಡಿದರು. ರಾಜೇಶ ಪುರೋಹಿತ್ ಮೂಡುಬಿದಿರೆ, ಪ್ರತಿಷ್ಠಾನ ಸದಸ್ಯರಾದ ಭಾರತಿ ಎಂ.ಎಲ್., ವಾಣಿ ಆಚಾರ್ಯ, ಸುಬ್ಬರಾಯ ಆಚಾರ್ಯರ ಮೊಮ್ಮಗ ಅರುಣ್ ಆಚಾರ್ಯ ಕದ್ರಿ ಕಂಬ್ಲ, ಹರೀಶ್ ಆಚಾರ್ಯ ಗೇರುಕಟ್ಟೆ, ರಂಜಿತ್ ಆಚಾರ್ಯ ಮೂಡುಬಿದಿರೆ, ಸತೀಶ್ ಆಚಾರ್ಯ ಪೆರ್ಮುದೆ, ಕುಂಟಾಡಿ ದಯಾನಂದ ಪೈ, ಪ್ರದೀಪ್ ಹೆಬ್ಬಾರ್ ಚಾರ, ಸದಾನಂದ ಆಚಾರ್ಯ ನೂರಾಲ್ ಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.
ಪುರಂದರ ಪುರೋಹಿತ್ ಮೂಡುಬಿದಿರೆ ಪ್ರಶಸ್ತಿ ಪತ್ರ ವಾಚಿಸಿದರು. ದಿನೇಶ್ ಶರ್ಮ ಕೊಯ್ಯೂರು ಕಾರ್ಯಕ್ರಮ ನಿರೂಪಿಸಿದರು.
ಕರ್ಮಬಂಧ ತಾಳಮದ್ದಳೆಯಲ್ಲಿ ಭಾಗವತರಾಗಿ ದೇವರಾಜ ಆಚಾರ್ಯ, ಐಕಳ ಹಿಮ್ಮೇಳದಲ್ಲಿ ಯೋಗೀಶ ಆಚಾರ್ಯ ಉಳೆಪಾಡಿ, ಅಶೋಕ ಆಚಾರ್ಯ ಉಳೆಪಾಡಿ, ಚಕ್ರತಾಳದಲ್ಲಿ ಜಗದೀಶ ಆಚಾರ್ಯ ಬೇಲಾಡಿ, ಅರ್ಥದಾರಿಗಳಾಗಿ ವಿದ್ವಾನ್ ಹಿರಣ್ಯ ವೆಂಕಟೇಶ ಭಟ್, ಗಣೇಶ ಶೆಟ್ಟಿ ಕನ್ನಡಿಕಟ್ಟೆ, ದಿವಾಕರ ಆಚಾರ್ಯ ಗೇರುಕಟ್ಟೆ, ದಿನೇಶ ಶರ್ಮ ಕೊಯ್ಯೂರು ಭಾಗವಹಿಸಿದ್ದರು.