

ಮಂಡ್ಯ: ನಗರದ ಗುತ್ತಲು ಅರ್ಕೇಶ್ವರಸ್ವಾಮಿ ದೇವಾಲಯದ ಬ್ರಹ್ಮ ರಥೋತ್ಸವವನ್ನು ಮಾ.14ರಂದು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಅಂದು ಬೆಳಗ್ಗೆ 9.41 ರಿಂದ 10.29 ರ ಸುಮಾರಿಗೆ ರಥೋತ್ಸವ ನಡೆಯಲಿದೆ. ಶೈವಾಗಮೋಕ್ತ ವಿಶೇಷ ಪೂಜಾ ಉತ್ಸವಾದಿಗಳ ಕಾರ್ಯಮಗಳು ಮಾ.8 ರಿಂದ ಪ್ರಾರಂಭವಾಗಿ 17ರಂದು ಮುಕ್ತಾಯವಾಗಲಿದೆ. ಪ್ರತಿ ದಿನ ಪೂಜಾ ಕೈಂಕರ್ಯ ನೆರವೇರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.