ಮಂಡ್ಯ ನಗರದಲ್ಲಿ ಅರ್ಕೇಶ್ವರಸ್ವಾಮಿ ಬ್ರಹ್ಮರಥೋತ್ಸವ ಸಂಭ್ರಮ

mandya
Published on

ಮಂಡ್ಯ: ನಗರದ ಗುತ್ತಲು ಬಡಾವಣೆಯಲ್ಲಿರುವ ಪುರಾಣ ಪ್ರಸಿದ್ಧ ಅರ್ಕೇಶ್ವರಸ್ವಾಮಿ ಬ್ರಹ್ಮರಥೋತ್ಸವ ಭಕ್ತರ ಜಯಘೋಷದ ನಡುವೆ ವಿಜೃಂಭಣೆಯಿಂದ ನಡೆಯಿತು.

ರಥೋತ್ಸವಕ್ಕೂ ಮುನ್ನ ದೇವಾಲಯದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು. ರುದ್ರಾಭಿಷೇಕ, ಪಂಚಮೂರ್ತಿ, ಹವನ ಹೋಮ ನಂತರ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಬೆಳಗಿನ ಜಾವ 5 ಗಂಟೆಗೆ ರಥಕ್ಕೆ ಬಲಿಪೂಜೆ, ರಥದ ಪೂಜೆ, ರಥ ಹಾದುಹೋಗುವ ಬೀದಿಯಲ್ಲಿ ವಾಸ್ತುಬಲಿ ಪ್ರಧಾನ, ಉತ್ಸವ ದೇವರ ಮನೆಯಲ್ಲಿ ಮಂಟಪೋತ್ಸವ, ತೇರಡಿ ಉತ್ಸವ, ಗೋದಮನಿಗೆ ಮತ್ತು ತೇರಿಗೆ ಪೂಜೆ ಸೇರಿದಂತೆ ವಿವಿಧ ಪೂಜಾ ಕಾರ್ಯಗಳನ್ನು ನಡೆಸಲಾಯಿತು. ಬಳಿಕ ಬೆಳಗ್ಗೆ 10 ಗಂಟೆಗೆ ಶುಭಲಗ್ನದ ಮಹೂರ್ತದಲ್ಲಿ ಬ್ರಹ್ಮರಥೋತ್ಸವ ನಡೆಯಿತು. ಸಹಸ್ರಾರು ಭಕ್ತರು ರಥವನ್ನು ಎಳೆದು ಭಕ್ತಿ ಭಾವವನ್ನು ಪ್ರದರ್ಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net