ಹಳ್ಳಿಗಳಲ್ಲೂ ಹಕ್ಕು ಚಲಾವಣೆ ಚುರುಕು

26ark1
Published on

ಅರಕಲಗೂಡು: ತಾಲೂಕಿನಲ್ಲಿ ಲೋಕಸಭಾ ಚುನಾವಣೆ ಶುಕ್ರವಾರ ಯಾವುದೇ ಅಹಿತಕರ ಘಟನೆಗಳಿಲ್ಲದೆ ಶಾಂತಿಯುತವಾಗಿ ನಡೆಯಿತು.
ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಬೆಳಗ್ಗೆ ಮತದಾನ ಮಂದಗತಿಯಲ್ಲಿ ಸಾಗಿತು. ಬಳಿಕ 11 ಗಂಟೆ ನಂತರ ಚುರುಕು ಪಡೆದುಕೊಂಡಿತು. ಮತ್ತೆ ಮಧ್ಯಾಹ್ನ ಬೇಸಿಗೆ ಬಿಸಿಲಿನ ಕಾರಣದಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮನೆಯಲ್ಲೇ ಉಳಿದಿದ್ದರಿಂದ ಮತಗಟ್ಟೆಯಲ್ಲಿ ಮತದಾನ ನೀರಸವಾಗಿತ್ತು. ಮಧ್ಯಾಹ್ನ 3 ಗಂಟೆ ನಂತರ ಬಿರುಸು ಪಡೆದುಕೊಂಡಿತು. ಹಳ್ಳಿಗಳಲ್ಲೂ ಮತದಾರರು ಉತ್ಸಾಹದಿಂದ ಮತ ಚಲಾಯಿಸುತ್ತಿದ್ದ ದೃಶ್ಯ ಕಂಡುಬಂತು.
ಶಾಸಕ ಎ. ಮಂಜು ಸ್ವಗ್ರಾಮ ಹನ್ಯಾಳು ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು. ಕಾಂಗ್ರೆಸ್ ಮುಖಂಡರಾದ ಕೃಷ್ಣೇಗೌಡ ದೊಡ್ಡಮಗ್ಗೆ ಹಾಗೂ ಶ್ರೀಧರ ಗೌಡ ಅವರು ಮಜ್ಜನಹಳ್ಳಿ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net