ಕೇರಳಾಪುರದಲ್ಲಿ ಗ್ರಾಮ ಸುಭಿಕ್ಷಾ ಕಾರ್ಯಕ್ರಮ

19ark1
Published on

ಅರಕಲಗೂಡು : ಗ್ರಾಮ ವಿಕಸನಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಉತ್ತಮ ಸೇವಾ ಕಾರ್ಯಗಳನ್ನು ಕೈಗೊಂಡಿದೆ ಎಂದು ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಎಸ್.ಬಿ. ಜಿನ್ನಪ್ಪ ಹೇಳಿದರು. ತಾಲೂಕಿನ ಕೇರಳಾಪುರದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಶ್ರೀ ವೀರಭದ್ರೇಶ್ವರ ದೇವಸ್ಥಾನ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸಹಯೋಗದೊಂದಿಗೆ ಬುಧವಾರ ಆಯೋಜಿಸಿದ್ದ ಗ್ರಾಮ ಸುಭಿಕ್ಷಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಯೋಜನೆ ಅಡಿ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳ ಪ್ರಗತಿ, ಈಗಾಗಲೇ ವಿತರಣೆ ಆಗಿರುವ ಅನುದಾನಗಳ ವಿವರಗಳನ್ನು ವಿವರಿಸಿದ ಅವರು, ಹಳ್ಳಿಗಾಡಿನ ಪ್ರಗತಿಯೇ ಸಂಸ್ಥೆ ಉದ್ದೇಶ ಎಂದರು. ಒಕ್ಕೂಟದ ಅಧ್ಯಕ್ಷ ನಾಗರಾಜು, ವಲಯದ ಮೇಲ್ವಿಚಾರಕ ವಿನಯ್ ಕುಮಾರ್, ಸೇವಾ ಪ್ರತಿನಿಧಿಗಳಾದ ಹೇಮಲತಾ, ರತ್ನಮ್ಮ, ದೀಪಿಕಾ, ಶಶಿಕುಮಾರ್, ದೇವರಾಜು, ಭಾಗೀರಥಿ, ಸೋಮಾಚಾರಿ,ಸೇವಾದಾರರಾದ ರೇಶ್ಮಾ, ವಿನೋದಾ, ಸುಷ್ಮಿತಾ ಭಾಗವಹಿಸಿದ್ದರು. ಇದೇ ಸಂದರ್ಭ ಸಂಸ್ಥೆಯಿಂದ ಬಿಡುಗಡೆಯಾದ ಕೃಷಿ ಅನುದಾನ, ಮಂಜೂರಾತಿ ಪತ್ರ, ನೆರೆಹಾವಳಿ ಪರಿಹಾರ, ಅರೋಗ್ಯ ರಕ್ಷಾ ವಿಮೆ, ಪ್ರಗತಿ ರಕ್ಷಾ ಕಾರ್ಯಕ್ರಮದ ಚೆಕ್‌ಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಲಾಯಿತು. ಶ್ರೀ ವೀರಭದ್ರೇಶ್ವರ ಸ್ವಾಮಿಗೆ ರುದ್ರಾಭಿಷೇಕ ಹಮ್ಮಿಕೊಳ್ಳಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net