ಅರಕಲಗೂಡು: ಪಟ್ಟಣದಲ್ಲಿ ಗುರುವಾರ ಸಂಜೆ ಧಾರಾಕಾರ ಮಳೆ ಸುರಿಯಿತು. ದಿನವಿಡೀ ಮೋಡ ಮುಸುಕಿದ ವಾತಾವರಣವಿದ್ದು,.ಸಂಜೆ ವೇಳೆಗೆ ಮೋಡ ಕವಿದು ಇಳೆಗೆ ಸುರಿದ ವರ್ಷಧಾರೆ ಪಟ್ಟಣಕ್ಕೆ ತಂಪೆರೆಯಿತು. ಮಳೆಯಿಂದಾಗಿ ತಾಲೂಕಿನಾದ್ಯಂತ ಕೃಷಿ ಚಟುವಟಿಕೆಗಳು ಗರಿ ಗೆದರಿವೆ.