

ಅರಕಲಗೂಡು : ತಾಲೂಕಿನ ಮಲ್ಲಿಪಟ್ಟಣ ಹೋಬಳಿಯಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ಮಂಗಳವಾರ ರಾತ್ರಿ ಜಮೀನಿಗೆ ನುಗ್ಗಿ ಬೆಳೆ ಹಾನಿಪಡಿಸಿವೆ.
ಪಾರಸನಹಳ್ಳಿ, ದಾಸನಪುರ, ಮಾಗೋಡು ಸುತ್ತಮುತ್ತಲಿನ ಹಳ್ಳಿಗಳ ರೈತರ ಬೆಳೆ ಜಮೀನಿನ ಮೇಲೆ ದಾಳಿ ನಡೆಸಿರುವ ಕಾಡಾನೆಗಳ ಹಿಂಡು ಅಡಕೆ, ತೆಂಗು, ಜೋಳ, ಗೆಣಸು ಮತ್ತಿತರ ಬೆಳೆಗಳನ್ನು ತುಳಿದು, ತಿಂದು ನಾಶಪಡಿಸಿವೆ.
ಆಹಾರಕ್ಕಾಗಿ ರಾತ್ರಿ ವೇಳೆ ಜಮೀನಿಗೆ ನುಗ್ಗುತ್ತಿರುವ ಕಾಡಾನೆಗಳು ಬೆಳಕಾಗುವಷ್ಟರಲ್ಲಿ ಕಟ್ಟೇಪುರ ಅರಣ್ಯ, ಬೈಸೂರು ಅರಣ್ಯ ಪ್ರದೇಶಕ್ಕೆ ತೆರಳುತ್ತಿವೆ, ಕಾಡಾನೆಗಳ ಉಪಟಳದಿಂದ ಬೆಳೆದ ಬೆಳೆಗಳನ್ನು ಕಳೆದುಕೊಳ್ಳುವಂತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.