

ಕಾರವಾರ: ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಕೇರಳ ಮೂಲದ ಅರ್ಜುನ್ ಮೃತದೇಹ ಪತ್ತೆಯಾಗಿದೆ.
ಜು. 16ರಂದು ಗುಡ್ಡ ಕುಸಿತ ಸಂಭವಿಸಿತ್ತು. 11 ಜನ ನಾಪತ್ತೆಯಾಗಿದ್ದರು. ಮೂವರ ಸುಳಿವು ಇದುವರೆಗೆ ದೊರಕಿರಲಿಲ್ಲ.
ಕಳೆದ ಐದು ದಿನದಲ್ಲಿ ಗಂಗಾವಳಿ ನದಿಯಲ್ಲಿ ಬಿದ್ದ ಮಣ್ಣನ್ನು ಡ್ರಜ್ಜಿಂಗ್ ಯಂತ್ರದಿಂದ ತೆರವು ಮಾಡಲಾಗುತ್ತಿತ್ತು. ಬುಧವಾರ ಲಾರಿಯ ಸುಳಿವು ಸಿಕ್ಕಿದ್ದು ಎತ್ತುತ್ತಿದ್ದಂತೆ ಅದರಲ್ಲಿ ಅರ್ಜುನ್ ಮೃತ ದೇಹ ಸಂಪೂರ್ಣ ಜೀರ್ಣವಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳೀಯರಾದ ಲೋಕೇಶ ನಾಯ್ಕ, ಜಗನ್ನಾಥ ನಾಯ್ಕ ಅವರ ಸುಳಿವು ಇನ್ನಷ್ಟೇ ಸಿಗಬೇಕಿದೆ.