ಅರ್ಜುನಾ ವರ ಜ್ಯುವೆಲರ್ಸ್​ಗೆ ವಾರ್ಷಿಕೋತ್ಸವ: ಗ್ರಾಹಕರ ಅಭಿರುಚಿಗೆ ತಕ್ಕಂತೆ ಚಿನ್ನಾಭರಣ ಸಂಗ್ರಹ

Arjuna vara
Published on

ಬೆಂಗಳೂರು: ಚಿನ್ನಾಭರಣಗಳ ಮಾರಾಟ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿರುವ ‘ಅರ್ಜುನಾ ವರ ಜ್ಯುವೆಲರ್ಸ್’, ತನ್ನ ಮೊದಲ ವಾರ್ಷಿಕೋತ್ಸವ ಆಚರಿಸಿಕೊಂಡಿದೆ. ಭಾನುವಾರ ಜಯನಗರದ 4ನೇ ‘ಟಿ’ ಬ್ಲಾಕ್​ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಟ ಸುದೀಪ್ ಮತ್ತು ಶಾಸಕಿ ಸೌಮ್ಯಾ ರೆಡ್ಡಿ ಭಾಗವಹಿಸಿ, ಮಳಿಗೆಯಲ್ಲಿ ವಿವಿಧ ಆಭರಣಗಳನ್ನು ವೀಕ್ಷಿಸಿದರು.

ಆಭರಗಳ ವ್ಯಾಪಾರದಲ್ಲಿ ಅರ್ಜುನಾ ವರ ಜ್ಯುವೆಲರ್ಸ್​ ಆರು ದಶಕಗಳಿಗೂ ಹೆಚ್ಚು ಕಾಲದ ಹಾಗೂ ಬಹು-ಪೀಳಿಗೆಯ ಪರಂಪರೆಯನ್ನು ಹೊಂದಿದೆ. ಕೈಯಿಂದ ವಿನ್ಯಾಸಗೊಳಿಸಿರುವ ಆಭರಣಗಳು, ವಜ್ರದಾಭರಣಗಳು, ಸಾಂಪ್ರದಾಯಿಕ ಆಭರಣ, ಕತ್ತರಿಸದಿರುವ ವಜ್ರಗಳ ಸಂಗ್ರಹವಾದ ಆಭರಣ ಹಾಗೂ ವಿವಾಹ ಸಮಾರಂಭಗಳಿಗೆ ಧರಿಸುವ ಆಭರಣಗಳು ಸೇರಿ 5 ಸಾವಿರ ವಿನ್ಯಾಸದ ಆಭರಣಗಳು ಮಳಿಗೆಯಲ್ಲಿ ಲಭ್ಯ. ಲೈಟ್​ವೇಟ್ ಹಾಗೂ ಹೊಸ ಪರಿಕಲ್ಪನೆಯ ಚಿನ್ನಾಭರಣಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 60 ವರ್ಷಗಳಿಂದ ಚಿನ್ನಾಭರಣ ಮಾರಾಟ ಉದ್ಯಮದಲ್ಲಿ ತೊಡಗಿದ್ದೇವೆ. ನಾವು 3ನೇ ತಲೆಮಾರಿನವರು ಎಂದು ರಾಹುಲ್ ಜೈನ್ ತಿಳಿಸಿದರು.

ಇನ್ನು ಗ್ರಾಹಕರು ಬ್ರ್ಯಾಂಡ್‌ನ ಮಳಿಗೆಗಳಿಗೆ ಕಾಲಿಟ್ಟಾಗ, ತಮ್ಮ ಮನೆಗೆ ಬರುತ್ತಿರುವಂತೆ ಭಾವಿಸಬೇಕೆಂದು ಅರ್ಜುನಾ ವರ ಜ್ಯುವೆಲರ್ಸ್ ಬಯಸಿರುವುದಾಗಿ ತಿಳಿಸಿದೆ. ಈಗಿನ ಗ್ರಾಹಕರಲ್ಲಿರುವ ಟ್ರೆಂಡ್ ಮತ್ತು ಅಗತ್ಯವನ್ನು ಗುರುತಿಸಿ, ಹಗುರವಾದ ಆಭರಣಗಳು ಭವ್ಯವಾಗಿ ಕಾಣುವಷ್ಟು ನವೀನತೆಯನ್ನು ಮಳಿಗೆ ಹೊಂದಿದೆ. ಈ ಉದ್ಯಮದಲ್ಲಿ ಒಳ್ಳೆಯ ಹೆಸರು ಗಳಿಸುವುದರೊಂದಿಗೆ ಮಳಿಗೆ ಮತ್ತು ಆನ್‌ಲೈನ್‌ನಲ್ಲಿ ಗ್ರಾಹಕರ ನಾಡಿಮಿಡಿತದೊಂದಿಗೆ ನಿರಂತರ ಸಂಪರ್ಕದಲ್ಲಿರುವುದು ಅರ್ಜುನಾ ವರ ಜ್ಯುವೆಲರ್ಸ್​ ಗುರಿಯಾಗಿದೆ. 

ಅರ್ಜುನಾ ವರ ಜ್ಯುವೆಲರ್ಸ್ ಸಹ ಸಂಸ್ಥಾಪಕ ರಾಹುಲ್ ಜೈನ್ ಮಾತನಾಡಿ, ಕರೊನಾ ನಡುವೆಯೂ ನಾವು ಮಳಿಗೆ ಆರಂಭಿಸಿ ಈಗ ಒಂದು ವರ್ಷ ತುಂಬಿದೆ. ಸ್ವದೇಶಿ ಬ್ರಾ್ಯಂಡ್ ಅನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ. ನಟ ಸುದೀಪ್ ನಮ್ಮ ‘ಕುಟುಂಬ’ದ ಸದಸ್ಯರಿದ್ದಂತೆ. 2020-21ರಲ್ಲಿ ರಾಷ್ಟ್ರೀಯ ಆಭರಣ ಪ್ರಶಸ್ತಿ ಸಿಕ್ಕಿದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಚಿನ್ನಾಭರಣಗಳ ಸಂಗ್ರಹವಿದೆ. ಯುವಜನತೆ ಬಯಸುವಂತಹ ಹೊಸ ಫ್ಯಾಷನ್​ಗಳ ಆಭರಣಗಳಿವೆ ಎಂದರು.

ಅರ್ಜುನಾ ವರ ಜ್ಯುವೆಲರ್ಸ್​ಗೆ 2020-21ರಲ್ಲಿ ರಾಷ್ಟ್ರೀಯ ಆಭರಣ ಪ್ರಶಸ್ತಿ ಲಭಿಸಿರುವುದು ನನಗೆ ಖುಷಿಯಾಗಿದೆ. ಎಲ್ಲ ಆಭರಣ ಮಳಿಗೆಗಳಿಗೆ ಇಂತಹ ಪ್ರಶಸ್ತಿಗಳು ಸಿಗುವುದಿಲ್ಲ. ಅರ್ಜುನಾ ವರ ಜ್ಯುವೆಲರ್ಸ್ ಆಕರ್ಷಕ ಆಭರಣಗಳ ಮಾರಾಟದ ಜತೆಗೆ ಗ್ರಾಹಕರ ವಿಶ್ವಾಸ ಗಳಿಸಿರುವುದಕ್ಕೆ ಈ ಅಂಶವೇ ಸಾಕ್ಷಿಯಾಗಿದೆ. | ಸುದೀಪ್, ನಟ

Sudeep 8
Sudeep 9
Sudeep 10
Sudeep 11
Sudeep 12
Sudeep 13

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net