ಅರ್ಜುನ್‌ ಶವ ಹಸ್ತಾಂತರ

Arjun-body.
Published on

ಕಾರವಾರ: ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಮೃತಪಟ್ಟ ಅರ್ಜುನ್‌ ಶವವನ್ನು ಶುಕ್ರವಾರ ಕುಟುಂಬದವರಿಗೆ ಹಸ್ತಾಂತರಿಸಲಾಯಿತು.

ಬುಧವಾರ ಗಂಗಾವಳಿ ನದಿಯಾಳದಿಂದ ಲಾರಿಯನ್ನು ಮೇಲೆತ್ತಲಾಗಿತ್ತು. ಅದರ ಕ್ಯಾಬಿನ್‌ ಡ್ರೈವರ್‌ ಸೀಟ್‌ನಲ್ಲೇ ಅರ್ಜುನ್‌ ದೇಹ ತೀರ ಶಿಥಿಲಾವಸ್ಥೆಯಲ್ಲಿ ಪತ್ತೆಯಾಗಿತ್ತು. ಅವುಗಳನ್ನು ಸಂಗ್ರಹಿಸಿ ಒಂದು ಕವರ್‌ನಲ್ಲಿ ಹಾಕಿ ಕಾರವಾರ ಜಿಲ್ಲಾ ಆಸ್ಪತ್ರೆಗೆ ತರಲಾಗಿತ್ತು.

ಜಿಲ್ಲಾ ಆಸ್ಪತ್ರೆಯಲ್ಲಿ ಡಿಎನ್‌ಎ ಪರೀಕ್ಷೆ ನಡೆಸಲಾಗಿದ್ದು, ಶವವು ಅರ್ಜುನ್‌ ಅವರದ್ದೇ ಎಂಬುದು ಖಚಿತವಾಗಿದೆ. ಇದರಿಂದ ಶುಕ್ರವಾರ ಶವವನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಕಾರವಾರ ಶಾಸಕ ಸತೀಶ ಸೈಲ್‌, ಕೇರಳ ಕಾಸರಕೋಡು ಶಾಸಕ ಎಂ.ಕೆ.ಅಶ್ರಫ್‌ ಹಾಗೂ ಇತರರು ಈ ಸಂದರ್ಭದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net