30ರಂದು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ

18 drama
Published on

ಮೈ ವೇದಿಕೆ ಸಂಸ್ಥೆ ವತಿಯಿಂದ ಜು.30 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 6ರವರೆಗೆ ರಾಜ್ಯ ಮುಕ್ತ ವಿವಿಯ ನಳ ಸಭಾಂಗಣದಲ್ಲಿ 6ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸಂಸ್ಥಾಪಕ ಮನೀಶ್‌ಗೌಡ ತಿಳಿಸಿದರು.

ನೃತ್ಯ, ಉತ್ತಮ ಭಾಷಣ, ನಟನೆ, ಚಿತ್ರರಚನೆ ಸ್ಪರ್ಧೆಗಳು ನಡೆಯಲಿದ್ದು, ಪ್ರವೇಶ ಶುಲ್ಕ 200 ರೂ. ನಿಗದಿಪಡಿಸಲಾಗಿದೆ. ಯಾವುದಾದರೊಂದು ಸ್ಪರ್ಧೆಗಳು ನಡೆದರೆ ಶಾಲೆಗಳಿಂದ ಕೇವಲ ಆಯ್ದ ವಿದ್ಯಾರ್ಥಿಗಳನ್ನಷ್ಟೇ ಕಳುಹಿಸಲಾಗುತ್ತಿದೆ.

ಇದರಿಂದಾಗಿ ಇತರ ವಿದ್ಯಾರ್ಥಿಗಳು ತಮ್ಮ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಸಿಗದೆ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಎಲ್ಲ ವಿದ್ಯಾರ್ಥಿಗಳಿಗೂ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಸ್ಪರ್ಧೆ ಆಯೋಜಿಸಲಾಗುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಯಾವುದಾದರೂ ಒಂದು ವಿಷಯ ನೀಡಿ ವಿದ್ಯಾರ್ಥಿಗಳ ಆಲೋಚನೆ ಸೀಮಿತಗೊಳಿಸುವ ಬದಲು ವಿದ್ಯಾರ್ಥಿಗಳು ತಮಗಿಚ್ಛೆ ಬಂದ ವಿಷಯ ಆಯ್ದುಕೊಳ್ಳಲು ಅವಕಾಶ ನೀಡಲಾಗುತ್ತಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ ಮೊ: 7676531790 ಸಂಪರ್ಕಿಸಬೇಕೆಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net