ಅರಿಹಂತ ಆಸ್ಪತ್ರೆಗೆ ಆಂಬುಲೆನ್ಸ್ ಕೊಡುಗೆ

03 Jaggu 9
ಅರಿಹಂತ ಆಸ್ಪತ್ರೆಗೆ ಕ್ವಾಲಿಟಿ ಅನಿಮಲ್ ಫೀಡ್ಸ್ ಪ್ರೈ.ಲಿ.ನಿರ್ದೆಶಕ ಸಂಜೀವ್ ದೇಶಪಾಂಡೆ ಸೋಮವಾರ ಆಂಬುಲೆನ್ಸ್ ಕೊಡುಗೆ ಮಾಡಿದರು. ಡಾ.ಎಂ.ಡಿ.ದೀಕ್ಷಿತ, ಡಾ.ಪ್ರಭು ಹಳಕಟ್ಟಿ, ಡಾ.ಸೂರಜ್ ಇತರರಿದ್ದರು.
Published on

ಬೆಳಗಾವಿ: ಕ್ವಾಲಿಟಿ ಅನಿಮಲ್ ಫೀಡ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಸಂಜೀವ್ ದೇಶಪಾಂಡೆ ಅವರು ಅರಿಹಂತ ಆಸ್ಪತ್ರೆಗೆ (ಪ್ರಿಯದರ್ಶಿನಿ ಐ ಹೆಲ್ತ್ ಕೇರ್ ಪ್ರೈ.ಲಿ.ಗೆ) ಸಿಎಸ್‌ಆರ್ ನಿಯಡಿ ಸೋಮವಾರ ಆಂಬುಲೆನ್ಸ್ ಕೊಡುಗೆ ನೀಡಿದರು. ಅರಿಹಂತ ಆಸ್ಪತ್ರೆಯ ಎಂ.ಡಿ., ಸಿಇಒ ಮತ್ತು ಮುಖ್ಯ ಹೃದಯ ಶಸಚಿಕಿತ್ಸಕ ಡಾ.ಎಂ.ಡಿ. ದೀಕ್ಷಿತ್ ಅವರು ಸಂಜೀವ್ ದೇಶಪಾಂಡೆ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಈ ಆಂಬುಲೆನ್ಸ್ ತುರ್ತು ಚಿಕಿತ್ಸೆ ನೀಡುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ರೋಗಿಗಳಿಗೆ ತ್ವರಿತ ಚಿಕಿತ್ಸೆ ನೀಡಲು ಸಹಾಯಕವಾಗಲಿದೆ. ನಮ್ಮ ಆಸ್ಪತ್ರೆಯ ತಂಡವು ಕ್ವಾಲಿಟಿ ಅನಿಮಲ್ ಫೀಡ್ಸ್ ಪ್ರೈ.ಲಿ.ನ ಆರೋಗ್ಯ ಸೇವಾ ಮತ್ತು ಸಾಮಾಜಿಕ ಬದ್ಧತೆಗೆ ಧನ್ಯವಾದ ಅರ್ಪಿಸಿದ್ದಾರೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net