ಅರಿಹಂತ ಸೌಹಾರ್ದ ಸಹಕಾರಿ ಮಾದರಿ

15HUK3
Published on

ಹುಕ್ಕೇರಿ: ತಾಲೂಕಿನ ಹುಲ್ಲೋಳಿ ಗ್ರಾಮದ ಅರಿಹಂತ ಸೌಹಾರ್ದ ಸಹಕಾರ ಸಂಘ ಹೆಮ್ಮರವಾಗಿ ಬೆಳೆದು ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಚಿಕ್ಕೋಡಿ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ಹೇಳಿದರು.

ಹುಲ್ಲೋಳಿ ಗ್ರಾಮದ ಪ್ರಧಾನ ಕಾರ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 26ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಣ ಜತೆಗೆ ಹಳ್ಳಿಗರಿಗೆ ನೀರು ಕಡಿಮೆ ದರದಲ್ಲಿ ಶುದ್ಧ ಕುಡಿಯುವ ಪೂರೆಸುತ್ತಿರುವ ಸಂಘದ ಕಾರ್ಯಾ ಮಾದರಿ ಎಂದರು.

ಸಂಘದ ಅಧ್ಯಕ್ಪ ಭರಮಪ್ಪ ಚೌಗಲಾ, ಹಿರಿಯ ನಿರ್ದೇಶಕರಾದ ಜಿನಪ್ಪ ಸಪ್ತಸಾಗರ, ಪಿ.ಆರ್​.ಚೌಗಲಾ ಮಾತನಾಡಿ, ಸಹಕಾರ ಸಂಘ ಇದೀಗ 5.72 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಸಾಧನೆಗೆ ಆಡಳಿತ ಮಂಡಳಿ ಮತ್ತು ಸಿಬ್ಬಂದಿ, ಸದಸ್ಯರು ಹಾಗೂ ಗ್ರಾಹಕರ ಕಾರಣ ಎಂದರು.

ಸಂದ ಪ್ರಧಾನ ವ್ಯವಸ್ಥಾಪಕ ಆನಂದ ಚೌಗಲಾ ಮತ್ತು ಆಂತರಿಕ ಲೆಕ್ಕ ಪರಿಶೋಧಕ ಮಹಾವೀರ ಚೌಗಲಾ ವಾರ್ಷಿಕ ವರದಿ ಓದಿ, ಸಂ 18430 ಸದಸ್ಯರು, 296.63 ಕೋಟಿ ರೂ. ಠೇವಣಿ, 327.82 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿ, 214.9 ಕೋಟಿ ರೂ. ಸಾಲ ವಿತರಿಸಿದೆ. ಸಂ ಪ್ರಧಾನ ಕಚೇರಿ ಸೇರಿ 13 ಶಾಖೆಗಳಿದ್ದು, ಹೆಚ್ಚಿಸುವ ಚಿಂತನೆಯಿದೆ ಎಂದರು.

ದರೂರ ಶಾಖೆಯ ಸುರೇಶ ಮಾಯನ್ನವರ ಮಾತನಾಡಿದರು. ಪ್ರತಿಭಾವಂತ ಮಕ್ಕಳು, ಗಣ್ಯರನ್ನು ಸತ್ಕರಿಸಲಾಯಿತು. ಉಪಾಧ್ಯಕ್ಪ ಬಾಹುಬಲಿ ನಾಗನೂರಿ, ನಿರ್ದೇಶಕರಾದ ರಾಮಪ್ಪ ಗೋಟೂರಿ, ಅಶೋಕ ಚೌಗಲಾ, ಬಾಬು ಅಕ್ಕಿವಾಟೆ, ಶ್ರುತಿ ಪಾಟೀಲ, ಸುಮತಿ ಚೌಗಲಾ, ಮಾಯಪ್ಪ ಹೊಳೆಪ್ಪಗೋಳ, ಬಸವರಾಜ ಪಾಟೀಲ, ಬಾಳಪ್ಪ ಸಂಕೇಶ್ವರಿ, ಅರುಣ ಚೌಗಲಾ, ಶಾಖಾ ವ್ಯವಸ್ಥಾಪಕ ಅಜಿತ ಚೌಗಲಾ, ಹಿರಿಯ ನಿರ್ದೇಶಕ ರವೀಂದ್ರ ಚೌಗಲಾ, ಜಯಪಾಲ ಚೌಗಲಾ, ಪ್ರಕಾಶ ಚೌಗಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net