

ಬೈಂದೂರು: ಅರೆಹೊಳೆ ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯರ 2024-25ನೇ ಸಾಲಿನ ಸಭೆ ಸಂಘದ ಅಧ್ಯಕ್ಷ ನರಸಿಂಹ ದೇವಾಡಿಗ ಅಧ್ಯಕ್ಷತೆಯಲ್ಲಿ ಸೋಮವಾರ ಜರುಗಿತು. ಇಪ್ಪತ್ತು ವರ್ಷಗಳಿಂದ ಸಂಘಕ್ಕೆ ಹಾಲು ಪೂರೈಸುತ್ತಿರುವ ಚಂದು ಪೂಜಾರಿ, ಸೂರ ಪೂಜಾರಿ ಹೇರೂರು ಅವರನ್ನು ಸನ್ಮಾನಿಸಲಾಯಿತು. ಬಳಿಕ ಸಂಘದ ಸದಸ್ಯರಿಗೆ ಶೇ.65 ಬೋನಸ್, ಹಾಲು ಉತ್ಪಾದಕರಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.
ದ.ಕ. ಹಾಲು ಉತ್ಪಾದಕರ ಒಕ್ಕೂಟದ ಬೈಂದೂರು ವಲಯದ ವಿಸ್ತರಣಾಧಿಕಾರಿ ರಾಜಾರಾಂ, ಸಂಘದ ಉಪಾಧ್ಯಕ್ಷ ವಿವೇಕಾನಂದ ಆಚಾರ್ಯ, ಸದಸ್ಯರಾದ ರಾಜು ಎಸ್.ದೇವಾಡಿಗ, ಅಣ್ಣಪ್ಪ ಆರ್.ಬಿಲ್ಲವ, ಶ್ರೀರಾಮ, ರಮಾನಂದ, ಭಾರತಿ ಆಚಾರ್ಯ, ಕಮಲಾ ದೇವಾಡಿಗ, ಬೇಬಿ ಎಸ್.ಪೂಜಾರಿ, ದೇವಕಿ ಚಂದನ್ ಉಪಸ್ಥಿತರಿದ್ದರು. ಸಹಾಯಕಿ ಜ್ಯೋತಿ ವಂದಿಸಿದರು. ಕಾರ್ಯದರ್ಶಿ ಉಮೇಶ್ ಮಧ್ಯಸ್ಥ ಕಾರ್ಯಕ್ರಮ ನಿರೂಪಿಸಿದರು.