

ವಿಜಯವಾಣಿ ಸುದ್ದಿಜಾಲ ನಂದಗುಡಿ
ಹೋಬಳಿಯ ನೆಲವಾಗಿಲು ಗ್ರಾಪಂನ ಅರೇಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ನೂತನ ಅಧ್ಯಕ್ಷರಾಗಿ ಎಂ.ದೇವರಾಜ ಹಾಗೂ ಉಪಾಧ್ಯಕ್ಷರಾಗಿ ಪಿ.ಶ್ರೀನಿವಾಸ ಅವಿರೋಧ ಆಯ್ಕೆಯಾದರು. ಸಂಘದ ಕಚೇರಿಯಲ್ಲಿ ನಿಗದಿಗೊಂಡಿದ್ದ ಚುನಾವಣಾ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿ ನಾಗಭೂಷಣ್ ಅವಿರೋಧ ಆಯ್ಕೆ ಎಂದು ೋಷಿಸಿದರು.
ಒಕ್ಕಲಿಗರ ಸಂಘದ ನಿರ್ದೇಶಕ ರಾಜಶೇಖರಗೌಡ ಮಾತನಾಡಿ, ಸಂಘವನ್ನು ಆರ್ಥಿಕವಾಗಿ ಮುನ್ನೆಡಸಲು ಶ್ರಮಿಸಬೇಕು. ಸರ್ಕಾರ ಹಾಗೂ ಬಮುಲ್‌ನಿಂದ ಸಿಗುವ ಸೌಲಭ್ಯಗಳನ್ನು ರೈತರಿಗೆ ಪ್ರಾಮಾಣಿಕವಾಗಿ ದೊರಕಿಸಿಕೊಡಬೇಕು. ಪಕ್ಷ ಭೇದ ಮರೆತು ಸಂಘದ ಆರ್ಥಿಕ ಅಭಿವೃದ್ಧಿಗೆ ಸಹಕರಿಸಿ ಎಂದರು.
ನೂತನ ನಿರ್ದೇಶಕರಾದ ಲಾವಣ್ಯಾ, ರಾಜಣ್ಣ ಜಿ.ರಮೇಶ್, ಎಸ್.ವಿಶ್ವನಾಥ್, ಕೆ.ರೆಡ್ಡಿ, ಸುವರ್ಣಾ, ರತ್ನಮ್ಮ, ದಯಾನಂದ, ಮುಖಂಡರಾದ ಜಿ.ಮೂರ್ತಿ, ಕೆ.ರಾಘವೇಂದ್ರ. ಎ.ಎಂ.ಆಂಜಿನಪ್ಪ, ಕಿರಣ್‌ಕುಮಾರ್, ರಾಘವೇಂದ್ರ, ವಿಶಾಲ್, ಬಿ.ಶ್ರೀನಿವಾಸ್, ಮುನಿರಾಜು, ಕೃಷ್ಣಪ್ಪ ಇದ್ದರು.