ಅಡಿಕೆ ಬೆಳೆಗಾರರಿಗೆ ತೊಂದರೆಯಾಗಲು ಬಿಡುವುದಿಲ್ಲ ARECANUT

ಮಹಾರಾಷ್ಟ್ರದಲ್ಲಿ ಕರ್ನಾಟಕದ ಅಡಿಕೆ ಬೆಳೆಗೆ ಬೆಂಕಿ ಹಚ್ಚುತ್ತಿರುವ ಕುರಿತು ಅಡಿಕೆ ವ್ಯಾಪರಿಗಳು ಶಾಸಕ ಅಶೋಕ್‌ ಕುಮಾರ್‌ ರೈ ಅವರಿಗೆ ದೂರು ನೀಡಿದರು.
ಮಹಾರಾಷ್ಟ್ರದಲ್ಲಿ ಕರ್ನಾಟಕದ ಅಡಿಕೆ ಬೆಳೆಗೆ ಬೆಂಕಿ ಹಚ್ಚುತ್ತಿರುವ ಕುರಿತು ಅಡಿಕೆ ವ್ಯಾಪರಿಗಳು ಶಾಸಕ ಅಶೋಕ್‌ ಕುಮಾರ್‌ ರೈ ಅವರಿಗೆ ದೂರು ನೀಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಅಶೋಕ್‌ ಕುಮಾರ್‌ ರೈ ಹೇಳಿಕೆ
ಪುತ್ತೂರು: ಮಹರಾಷ್ಟ್ರದಲ್ಲಿ ಅಡಿಕೆ ಲಾರಿಗಳನ್ನು ತಡೆಯುವ ವಿಚಾರ ಗಮನಕ್ಕೆ ಬಂದಿದ್ದು, ಅಡಿಕೆಯಲ್ಲಿ ಯಾವುದೇ ತಂಬಾಕು ಅಂಶ ಇಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕಿದೆ. ಅಧಿಕಾರಿಗಳು ಹೆದರಿಸುವ ಕುತಂತ್ರ ಮಾಡಿರಬಹುದು. ಸರಿಯಾದ ಮಾಹಿತಿ ಇಲ್ಲದೆಯೂ ಹೀಗಾಗಿರಬಹುದು. ಬೆಳೆಗಾರರಿಗೆ ತೊಂದರೆಯಾಗಲು ಬಿಡುವುದಿಲ್ಲ ಎಂದು ಶಾಸಕ ಅಶೋಕ್‌ ಕುಮಾರ್‌ ರೈ ಹೇಳಿದರು.
ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ರೈ ಮೈಸೂರಿನಲ್ಲಿ ಕಂಬಳ ನಡೆಸುವುದಕ್ಕೆ ವಾಟಾಳ್‌ ನಾಗರಾಜ್‌ ವಿರೋಧ ವ್ಯಕ್ತಪಡಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಂಬಳದ ಕುರಿತು ಹೆಚ್ಚಿನ ಮಾಹಿತಿ ಇಲ್ಲದೆ ಹಾಗೆ ವಿರೋಧ ವ್ಯಕ್ತಪಡಿಸಿರಬಹುದು. ಅವರು ಯಾವ ಕಾರಣಕ್ಕೆ ವಿರೋಧಿಸಿದ್ದಾರೆ ಎಂಬುದನ್ನು ಅವರಲ್ಲಿ ಮಾತನಾಡಿ ಚರ್ಚಿಸುತ್ತೇನೆ. ಕಂಬಳಕ್ಕಾಗಿಯೇ ಕೋಣಗಳನ್ನು ಮಕ್ಕಳ ರೀತಿ ಸಾಕಿ ಸಲಹುತ್ತಾರೆ. ದಸರಾ ಕಂಬಳವನ್ನು ಮೈಸೂರಿನ ಜನರೇ ಸ್ವಾಗತ ಮಾಡಿದ್ದಾರೆ. ಹೊಸದಿಲ್ಲಿಯ ಗಣರಾಜ್ಯೋತ್ಸವ ಪರೇಡ್‌ಗೆ ಕಂಬಳದ ಕೋಣಗಳನ್ನು ಕರೆದುಕೊಂಡು ಹೋಗುವ ಯೋಚನೆ ಇದ್ದು, ಪ್ರಯತ್ನಿಸಲಾಗುವುದು ಎಂದರು.
ಪಶ್ಚಿಮ ಬಂಗಾಲದಿಂದ ಬೀಡಿ ಬರುತ್ತಿರುವುದರಿಂದ ಸ್ಥಳೀಯ ಬೀಡಿ ಕಾರ್ಮಿಕರಿಗೆ ತೊಂದರೆಯಾಗುತ್ತಿದೆ ಎಂದು ಉದ್ದಿಮೆದಾರರು, ಗುತ್ತಿಗೆದಾರರು ನಮ್ಮ ಗಮನಕ್ಕೆ ತಂದಿದ್ದಾರೆ. ಅದರ ಕುರಿತು ನಿಖರ ಮಾಹಿತಿ ಇಲ್ಲ. ಈ ವಿಚಾರವನ್ನು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದ್ದು, ಅವರು ಪರಿಶೀಲನೆ ಮಾಡಿ ವರದಿ ನೀಡಿದ ಬಳಿಕ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net