Areca nut ಅಡಕೆಯಲ್ಲಿನ ಗರಿಷ್ಠ ತೇವಾಂಶದ ಪ್ರಮಾಣವನ್ನು ಶೇ.11 ಕ್ಕೆ ಹೆಚ್ಚಿಸುವಂತೆ ಕಾಗೇರಿ ಒತ್ತಾಯ

Areca nut
Published on

ಕಾರವಾರ: ಅಡಕೆ (Areca nut) ತೇವಾಂಶದ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಽಕಾರ(ಎಫ್‌ಎಸ್‌ಎಸ್‌ಐ) ಸಿಇಒ ಅವರಲ್ಲಿ ಮನವಿ ಮಾಡಿದ್ದಾರೆ.

ನವದೆಹಲಿಯಲ್ಲಿ ಬುಧವಾರ ಎಫ್‌ಎಸ್‌ಎಸ್‌ಐ ಸಿಇಒ ಕಮಲ್ ವರ್ಧನ್ ಅವರನ್ನು ಭೇಟಿಮಾಡಿ ಕಾಗೇರಿ ಚರ್ಚೆ ನಡೆಸಿದರು. ಅಡಕೆಯಲ್ಲಿ ಗರಿಷ್ಠ ಶೇ.7 ರಷ್ಟು ಮಾತ್ರ ತೇವಾಂಶ ಇರಬಹುದು ಎಂದು ಎಫ್‌ಎಸ್‌ಎಸ್‌ಐ ಮಾನದಂಡವನ್ನು ನಿಗದಿ ಮಾಡಿದೆ.

ಈ ಕಾರಣದಿಂದ ಗುಟಕಾ ಕಂಪನಿಗಳು ಶೇ.7 ಕ್ಕಿಂತ ಜಾಸ್ತಿ ತೇವಾಂಶ ಇರುವ ಅಡಕೆಯನ್ನು ತಿರಸ್ಕರಿಸುತ್ತಿವೆ. ಶಿರಸಿ, ಶಿವಮೊಗ್ಗ, ಮಂಗಳೂರು ಸೇರಿ ವಿವಿಧ ಭಾಗಗಳಿಂದ ಉತ್ತರ ಭಾರತದ ಕಡೆಗೆ ರವಾನೆಯಾದ ಸಾವಿರಾರು ಟನ್ ಅಡಕೆ ಇದೇ ಕಾರಣಕ್ಕೆ ವಾಪಸ್ ಬಂದಿದ್ದಿದೆ.

Areca nut ಬೆಳೆಗಾರರಿಗೆ ಸಂಕಷ್ಟ

ಇದರಿಂದ ವ್ಯಾಪಾರಸ್ಥರು ಕೋಟ್ಯಂತರ ನಷ್ಟ ಅನುಭವಿಸಿದ್ದಾರೆ. ಇದು ಅಡಕೆಯ ಬೆಲೆಯ ಮೇಲೆ ಪರಿಣಾಮ ಬೀರುತ್ತಿದ್ದು, ಆಮೂಲಕ ಬೆಳೆಗಾರರೂ ನಷ್ಟ ಅನುಭವಿಸುತ್ತಿದ್ದಾರೆ.

ಇದರಿಂದ ಅಡಕೆಯಲ್ಲಿರುವ ಗರಿಷ್ಠ ತೇವಾಂಶದ ಪ್ರಮಾಣವನ್ನು ಶೇ.11 ಕ್ಕೆ ಹೆಚ್ಚಿಸಿ, ಮಾನದಂಡವನ್ನು ನಿಗದಿ ಮಾಡಬೇಕು ಎಂದು ಕಾಗೇರಿ ಒತ್ತಾಯ ಮಾಡಿದರು. ಮತ್ತು ಈ ಸಂಬAಧದ ಹಲವು ವಿಷಯಗಳ ಬಗ್ಗೆ ಅವರು ಚರ್ಚೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net