ಬೆಂಗಳೂರಿನಲ್ಲಿ ಪ್ರತಿಭಟನೆಯ ಎಚ್ಚರಿಕೆ

arebhase
Published on

ಕುಶಾಲನಗರ:

ಕೆಲವು ದುಷ್ಟ ಶಕ್ತಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ತಮ್ಮ ದುಷ್ಕೃತ್ಯ ಮುಂದುವರಿಸಿದ್ದು, ಇಂಥ ದುಷ್ಕರ್ಮಿಗಳ ವಿರುದ್ಧ ಸಂಬAಧಿಸಿದವರು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಅರೆಭಾಷಿಕ ಗೌಡ ಸಂಘಗಳು ಬೆಂಗಳೂರಿನ ಒಕ್ಕಲಿಗರ ಸಂಘದ ಸಹಯೋಗದಲ್ಲಿ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಗೌಡ ಯುವ ವೇದಿಕೆಯ ರಿಷಿತ್ ಮಾದಯ್ಯ ಹೇಳಿದ್ದಾರೆ. ಜ. ೨೦ ರಂದು ಮಡಿಕೇರಿಯಲ್ಲಿ ಅರೆಭಾಷೆ ಒಕ್ಕಲಿಗ ಗೌಡರಿಂದ ನಡೆದ ಮೌನ ಮೆರವಣಿಗೆಯ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಅರೆಭಾಷೆ ಒಕ್ಕಲಿಗ ಗೌಡರ ಮೇಲೆ ಕೀಳುಮಟ್ಟದ ಭಾಷೆಯನ್ನು ಉಪಯೋಗಿಸಿ ಸಮಾಜದ ಶಾಂತಿ ಕದಡಲು ಪ್ರಯತ್ನ ಪಟ್ಟ ಸಂಘಟನೆಯೊAದರ ಸಹಚರರು ಮತ್ತು ಇತರರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗಿತ್ತು. ಆದರೆ ಇದರ ನಂತರವೂ ಅರೆಭಾಷೆ ಗೌಡರ ವಿರುದ್ಧ ನಿರಂತರವಾಗಿ ನಿಂದನೆಯ ಹೇಳಿಕೆ, ಆಡಿಯೋಗಳನ್ನು ಹರಿಬಿಡಲಾಗುತ್ತಿದೆ ಎಂದು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಆಡಿಯೊ ಒಂದರಲ್ಲಿ ತಲಕಾವೇರಿಯ ಪ್ರಕೃತಿ ವಿಕೋಪದಲ್ಲಿ ಪ್ರಾಣ ಕಳೆದುಕೊಂಡವರನ್ನು ಈ ದುಷ್ಕರ್ಮಿಗಳು ದೇವಸ್ಥಾನದ ದರೋಡೆಕೋರ ಮತ್ತು ಒಂದು ಜನಾಂಗ ವಿರೋಧಿ ಎಂಬುದಾಗಿ ವ್ಯಂಗ್ಯವಾಗಿ ಅಪಹಾಸ್ಯ ಮಾಡಿ ವಿಕೃತಿ ಮೆರೆದಿರುವುದು ಖಂಡನೀಯ. ಇವರ ಮುಖ್ಯ ಉದ್ದೇಶ ಕೊಡಗಿನಲ್ಲಿ ಶಾಂತಿ ಕದಡಿ ಜನಾಂಗ- ಜನಾಂಗಗಳ ನಡುವೆ ಕಲಹ ಉಂಟು ಮಾಡುವುದಾಗಿದೆ. ಇದಕ್ಕೆ ಅವಕಾಶ ಕೊಡದಂತೆ ಸಂಬAಧಪಟ್ಟ ದುಷ್ಕರ್ಮಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಕೊಡಗು ಗೌಡ ಯುವ ವೇದಿಕೆಯ ಪಾಣತ್ತಲೆ ಜಗದೀಶ್ ಮಂದಪ್ಪ, ನವೀನ್ ದೇರಳ, ಕುಶಾಲನಗರ ಗೌಡ ಯುವಕ ಸಂಘದ ಪಳಂಗೋಟು ವಿನಯ್ ಕಾರ್ಯಪ್ಪ, ವಿವೇಕ್ ಕಡವಡಿರ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net