ಕೊಡಗು ಗೌಡ ಅರೆಭಾಷೆ ಜನಾಂಗದವರ ವಧು-ವರರ ಸಮಾವೇಶ

15mdk01
Published on

ಕೊಡಗು ಗೌಡ ನಿವೃತ್ತ ನೌಕರರ ಸಂಘದ ವತಿಯಿಂದ ಕೊಡಗು ಗೌಡ ಅರೆಭಾಷೆ ಜನಾಂಗದವರಿಗಾಗಿ ವಧು-ವರರ ಸಮಾವೇಶ ಬುಧವಾರ ನಡೆಯಿತು.
ಕೊಡಗು ಗೌಡ ವಿದ್ಯಾ ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಡಯಟ್ ಕೂಡಿಗೆಯ ನಿವೃತ್ತ ಹಿರಿಯ ಉಪನ್ಯಾಸಕರಾದ ನಾಟೋಲನ ಸಾವಿತ್ರಿ ವಧು ವರರ ಸಮಾವೇಶ ಅರೆಭಾಷೆ ಜನಾಂಗದಲ್ಲಿ ಉತ್ತಮ ಸಂಬಂಧಗಳನ್ನು ಬೆಳೆಸಲು ಹೆಚ್ಚು ಸಹಕಾರಿಯಾಗಿದೆ. ಈ ಕಾರ್ಯಕ್ರಮವನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕೆಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಕೋರನ ಸಿ.ವಿಶ್ವನಾಥ ಈ ಬಾರಿ ೭೫ ಕ್ಕೂ ಹೆಚ್ಚಿನ ಆಕಾಂಕ್ಷಿಗಳು ವಧು-ವರರ ಸಮಾವೇಶದಲ್ಲಿ ಪಾಲ್ಗೊಂಡಿರುವುದು ಸಂತಸದ ವಿಚಾರವೆಂದರು.
ಪ್ರಮುಖರಾದ ಉಳುವಾರನ ರೋಶನ್ ವಧು-ವರರನ್ನು ವೇದಿಕೆಗೆ ಬರಮಾಡಿಕೊಂಡು ವಿವರಗಳನ್ನು ಸಭೆಗೆ ತಿಳಿಸಿದರು. ಸಂಘದ ನಿರ್ದೇಶಕಿ ಉಮಾದೇವಿ, ಕಾರ್ಯದರ್ಶಿ ಬಾರಿಕೆ ಅಯ್ಯಪ್ಪ, ಉಪಾಧ್ಯಕ್ಷ ಕುದುಪಜೆ ಬೋಜಪ್ಪ, ಖಜಾಂಚಿ ಕರಣನಯನ ನಾಗೇಶ್, ಜಂಟಿ ಕಾರ್ಯದರ್ಶಿ ಅತ್ತೈಡಿ ಕೃ?್ಣಪ್ಪ, ನಿರ್ದೇಶಕರುಗಳಾದ ಪೊನ್ನಚ್ಚನ ಸೋಮಣ್ಣ, ಬೈತಡ್ಕ ಬೆಳ್ಯಪ್ಪ, ದಂಬೆಕೋಡಿ ಆನಂದ, ಕುದುಪಜೆ ಶಾರದ, ಸೂದನ ಮೋಹಿನಿ, ಹೊಸೊಕ್ಲು ಟಿ.ಪೊನ್ನಪ್ಪ, ಗೋದೇಟಿರ ರಾಮಯ್ಯ, ಕುಲ್ಲಚೆಟ್ಟಿ ಪೂವಯ್ಯ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net