ಓದುಗರನ್ನು ತಲುಪುತ್ತಿವೆಯೇ ಪುಸ್ತಕಗಳು? : ಕರ್ನಾಟಕ ಕವಯಿತ್ರಿ ಸಂಘದ ಅಧ್ಯಕ್ಷೆ ಡಾ.ಎಚ್.ಎಲ್.ಪುಷ್ಪಾ ಪ್ರಶ್ನೆ

4
Published on

ಮೈಸೂರು: ಬಿಡುಗಡೆಗೊಳ್ಳುವ ಪುಸ್ತಕಗಳು ಓದುಗರನ್ನು ತಲುಪುತ್ತಿವೆಯೇ ಎನ್ನುವ ಪ್ರಶ್ನೆಗೆ ಉತ್ತರ ಕೊಂಡುಕೊಳ್ಳಬೇಕಿದೆ ಎಂದು ಕರ್ನಾಟಕ ಕವಯಿತ್ರಿ ಸಂಘದ ಅಧ್ಯಕ್ಷೆ ಡಾ.ಎಚ್.ಎಲ್.ಪುಷ್ಪಾ ಹೇಳಿದರು.

ಮೈಸೂರು ವಿಶ್ವವಿದ್ಯಾಲಂು ಸಂಶೋಧಕರ ಸಂಘ, ನೆಲೆ ಹಿನ್ನೆಲೆ, ಜೋಳಿಗೆ ಪ್ರಕಾಶನ ಚಾಮರಾಜನಗರದಿಂದ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ, ಲೇಖಕ ಹನೂರು ಚನ್ನಪ್ಪ ಅವರ ‘ಕಬ್ಬಿಣದ ಕುದುರೆಗಳು’ ಕಾದಂಬರಿ ಬಿಡುಗಡೆಗೊಳಿಸಿ ವಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಪುಸ್ತಕಗಳ ಬಿಡುಗಡೆ ದೊಡ್ಡ ಸವಾರಂಭದ ರೀತಿಂುಲ್ಲಿ ಕಂಗೊಳಿಸುತ್ತಿವೆ. ಆದರೆ ಇದರ ಮಧ್ಯೆ ಬಿಡುಗಡೆಗೊಂಡ ಕೃತಿಗಳನ್ನು ಕುರಿತು ಸಮಾಜದ ಮಧ್ಯದಲ್ಲಿ ಚರ್ಚೆಗಳಾಗುತ್ತಿವೆಂೆುೀ, ಜನರನ್ನು ತಲುಪುತ್ತವೆಂೆುೀ ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಇದಕ್ಕೆ ಉತ್ತರ ಕಂಡುಕೊಳ್ಳಬೇಕಿದೆ ಎಂದರು.

ಕೃತಿ ಬಿಡುಗಡೆ ಕಾಂರ್ುಕ್ರಮಗಳು ಒಂದು ರೀತಿಂು ಔಪಚಾರಿಕವಾಗುತ್ತಿವೆ. ಬಹು ವಾಧ್ಯಮಗಳ ಈ ಕಾಲದಲ್ಲಿ ಕೃತಿಗಳು ಕೇವಲ ಸೃಜನಶೀಲತೆಯಿಂದ ತಲುಪಬೇಕು ಎಂಬುದನ್ನೂ ನಾವು ದಾಟಿದ್ದೇವೆ. ಸಾವಾಜಿಕ ವಾಧ್ಯಮಗಳು ಸಹ ಸವಾಜವನ್ನು ಆವರಿಸಿಬಿಟ್ಟಿವೆ. ಇದರ ಜತೆಗೆ ಕೃತಿಗಳ ಬಿಡುಗಡೆಂುಲ್ಲಿ ವರ್ಗ, ವರ್ಣ, ಲಿಂಗಗಳ ಹಿನ್ನೆಲೆಗಳನ್ನು ಹುಡುಕುವ ಮನಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬಸವಣ್ಣನ ಕಾಲದಲ್ಲಿ ನಡೆದಂತಹ ಅಂತರ್ಜಾತಿ ವಿವಾಹ, ಕಲ್ಯಾಣದ ಕ್ರಾಂತಿ ಹಾಗೂ ಇವತ್ತಿನ ಅಂತರ್ಜಾತಿ ವಿವಾಹ ಪ್ರಸಂಗಗಳನ್ನು ಗಮನಿಸಿದಾಗ ಕಾಲ ಬದಲಾದರೂ ಜನರ ಆಲೋಚನೆ, ಮನಸ್ಥಿತಿ ಬದಲಾಗಿಲ್ಲ ಎನ್ನುವುದನ್ನು ಗಮನಿಸಬೇಕಾಗಿದೆ ಎಂದರು.

ಆಧುನಿಕವಾಗಿ ಸವಾಜ ಬೆಳೆದು, ಜಾತಿಗಳ ಸಂಕೋಲೆಗಳನ್ನು ಕಳಚಿ ಹೊರಬರಬೇಕೆಂಬ ಹಂತದಲ್ಲಿದ್ದೇವೆ ಎಂದು ಹೇಳುತ್ತೇವೆ. ಆದರೂ ಇಂತಹ ಸಂದರ್ಭಗಳಲ್ಲಿ ಕೋಮುವಾದಗಳು, ಮಂರ್ಾದೆ ಹತ್ಯೆಗಳು, ಜಾತಿ ಕಂದಕಗಳು ಹೆಚ್ಚುತ್ತಿವೆ. ಸಂವಿಧಾನ, ಕಾನೂನುಗಳಿದ್ದರೂ ಅಂತರ್ಜಾತಿ ವಿವಾಹಗಳು ಗೆಲ್ಲುವ ಹಾದಿಂುಲ್ಲಿವೆಂೆುೀ ಎಂಬ ಹಲವು ಪ್ರಶ್ನೆಗಳನ್ನು ‘ಕಬ್ಬಿಣದ ಕುದುರೆಗಳು’ ಕಾದಂಬರಿ ಹುಟ್ಟು ಹಾಕುತ್ತದೆ ಎಂದು ತಿಳಿಸಿದರು.

ಚರಿತ್ರೆ ಂಾವಾಗಲೂ ನಮ್ಮ ಬೆನ್ನ ಬದಿಂುಲ್ಲಿರುತ್ತದೆ. ಹಿಂದೆ ಏನಾಗಿದೆ ಎಂಬುದನ್ನು ಗಮನಿಸಿ, ಮುಂದೆ ಏನಾಗಬೇಕು ಎಂಬುದನ್ನು ಹೇಳಬೇಕು. ಆದರೆ ವ್ಯವಸ್ಥೆ ಬದಲಾದಂತೆ ಕಾಣುತ್ತಿಲ್ಲ ಎಂದರು.

ಪ್ರಗತಿಪರ ಧೋರಣೆ ಇರುವ ಸಾಹಿತಿ ಬಾನು ಮುಸ್ತಾಕ್, ದಸರಾ ಉದ್ಘಾಟನೆಗೆ ವಿರೋಧ ವ್ಯಕ್ತವಾಗುತ್ತಿರುವುದು ವಿಚಾರವನ್ನು ದಿಕ್ಕು ತಪ್ಪಿಸುವ ಕೆಲಸವಾಗುತ್ತಿದೆ. ಅರಿಶಿಣ, ಕುಂಕುಮ ಪದ ಸಾಂಕೇತಿಕವಾಗಿ ಹಿಂದಿನಿಂದಲೂ ಬಳಕೆಂುಲ್ಲಿದೆ. ಅದನ್ನು ಧಾರ್ಮಿಕ ಹಿನ್ನೆಲೆಂುಲ್ಲಿ ನೋಡುವ ಅಗತ್ಯವಿಲ್ಲ. ಅದೇ ಇವತ್ತು ಚರ್ಚೆಂು ಕಿರುಚಾಟವಾಗಿದೆ ಎಂದರು.

ಸಾಹಿತಿ ಡಾ.ವಡ್ಡಗೆರೆ ನಾಗರಾಜಂ್ಯು, ಪ್ರೊ.ಕೆ.ಎಸ್.ಭಗವಾನ್, ಸಂಸ್ಕತಿ ಚಿಂತಕ ಡಾ. ನಲ್ಲುಕುಂಟೆ ವೆಂಕಟೇಶಂ್ಯು, ಮಾಜಿ ಮೇಂುರ್ ಪುರುಷೋತ್ತಮ್, ಲೇಖಕ ಹನೂರು ಚನ್ನಪ್ಪ, ರಂಗಕರ್ಮಿ ಜನಾರ್ದನ (ಜನ್ನಿ), ಕೆ.ಆರ್.ಗೋಪಾಲಕೃಷ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net