

ವಿಜಯವಾಣಿ ಸುದ್ದಿಜಾಲ ಶಿರ್ವ
ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳ ತಂಡದಿಂದ ಅಟಲ್ ಟಿಂಕರಿಂಗ್ ಲ್ಯಾಬ್ ಸಹಕಾರದೊಂದಿಗೆ ಉಡುಪಿ ಒಳಕಾಡು ಸರ್ಕಾರಿ ಸಂಯುಕ್ತ ಪ್ರೌಢಶಾಲೆ ಮತ್ತು ಶ್ರೀ ಅನಂತೇಶ್ವರ ಪ್ರೌಢಶಾಲೆಯಲ್ಲಿ ಆರ್ಡಿನೋ ವಿಷಯದ ಕುರಿತು ಕಾರ್ಯಾಗಾರ ಇತ್ತೀಚೆಗೆ ನಡೆಯಿತು.
ಸಂಸ್ಥೆಯ ವಿದ್ಯುನ್ಮಾನ ಮತ್ತು ಸಂವಹನ ವಿಭಾಗ, ಗಣಕಯಂತ್ರ ವಿಭಾಗದ ವಿದ್ಯಾರ್ಥಿಗಳಾದ ಆದಿತ್ಯದಾಸ್, ಅತುಲ್ ಭಟ್, ಧನುಷ್ ಎಸ್., ಧ್ರುವ ಪಾಟೀಲ್ ಮತ್ತು ಕಾತ್ಯಾಯಿನಿ ಕಾಮತ್, ಪಂಚಮಿ ಹೆಬ್ಬಾರ್, ಧನುಷ್ ಮತ್ತು ಧನುಷ್ ಕುಮಾರ್ ಒಳಗೊಂಡ ತಂಡಗಳು ಆರ್ಡಿನೋ ಬೋರ್ಡ್ ಬಳಕೆ, ಆರ್ಡಿನೋ ಪ್ರೋಗ್ರಾಮಿಂಗ್, ಪ್ರಾಜೆಕ್ಟ್ ತಯಾರಿಕೆ ಹಾಗೂ ಇತರ ಇಲೆಕ್ಟ್ರಾನಿಕ್ ಘಟಕಗಳ ಬಳಕೆ ಬಗ್ಗೆ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು.
ಗಣಕಯಂತ್ರ ವಿಭಾಗದ ಪ್ರಾಧ್ಯಾಪಕ ರಾಘವೇಂದ್ರ ಈಶ್ವರ ಹೆಗ್ಡೆ ಕಾರ್ಯಕ್ರಮ ಸಂಯೋಜಿಸಿದರು. ಶ್ರೀ ಮಧ್ವ ವಾದಿರಾಜ ತಾಂತ್ರಿಕ ವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರ ಸಹಯೋಗದೊಂದಿಗೆ 17 ಶಾಲೆಗಳಲ್ಲಿ 6ನೇ ತರಗತಿಯಿಂದ 12ನೇ ತರಗತಿ ತನಕದ ವಿದ್ಯಾರ್ಥಿಗಳಿಗೆ ಆರ್ಡಿನೋ ಕಾರ್ಯಾಗಾರ ನಡೆಸುತ್ತಿದ್ದಾರೆ.