ಕೊಂಜಾಡಿ ಕುಂಟುಹೊಳೆಗಿಳಿದ ಯುವಕರಿಬ್ಬರು ಸಾವು

death web
Published on

ಆರ್ಡಿ: ಆರ್ಡಿ ಕೊಂಜಾಡಿ ಗಂಟುಬೀಳು ಚಕ್ಕರ್‌ಮಕ್ಕಿ ಸಮೀಪದಲ್ಲಿ ಹರಿಯುತ್ತಿದ್ದ ಕುಂಟುಹೊಳೆ ಕುಪ್ಪರಿಗೆಗುಂಡಿ ಎಂಬಲ್ಲಿ ಬಾಲಕರಿಬ್ಬರು ಸೋಮವಾರ ನೀರಿಗಿಳಿದು ಆಕಸ್ಮಿಕ ಸಾವನ್ನಪ್ಪಿದ್ದಾರೆ. 9ನೇ ಮೈಲ್‌ಕಲ್ಲು ನಿವಾಸಿ ದಿ.ಕಾಳು ನಾಯ್ಕ ಮಗ ಮೋಹನ ನಾಯ್ಕ (21), ಮಹಾಬಲ ನಾಯ್ಕ ಮಗ ಸುರೇಶ (19) ಸಾವನ್ನಪ್ಪಿದವರು.

ಇಬ್ಬರೂ ಕೊಂಜಾಡಿ ಗಂಟುಬೀಳು ಪರಿಸರಕ್ಕೆ ಸೋಮವಾರ ಕೂಲಿ ಕೆಲಸಕ್ಕೆ ಹೋಗಿದ್ದರು. ಹೊತ್ತು ಕಳೆದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆಯವರು ಹೊಳೆ ಸಮೀಪ ಹುಡುಕಿದಾಗ ಇಬ್ಬರ ಬಟ್ಟೆ ಹಾಗೂ ಚಪ್ಪಲಿ ಕಾಣಸಿಕ್ಕಿದೆ. ಮಧ್ಯಾಹ್ನ ಊಟದ ಬಳಿಕ ಸಮೀಪದಲ್ಲಿ ಹರಿಯುತ್ತಿದ್ದ ಕುಂಟುಹೊಳೆ ಕುಪ್ಪರಿಗೆಗುಂಡಿ ಎಂಬಲ್ಲಿ ಸ್ನಾನಕ್ಕೆ ನೀರಿಗಿಳಿದಿದ್ದರು ಎನ್ನಲಾಗಿದೆ. ಈಜಲು ಬಾರದೇ ಆಕಸ್ಮಿಕವಾಗಿ ಆಳವಾದ ನೀರಿನ ಗುಂಡಿಗೆ ಬಿದ್ದು ಸಾವನ್ನಪ್ಪಿರುವ ಅಂದಾಜಿನ ಮೇರೆಗೆ ಸ್ಥಳೀಯರು ಹೊಳೆಯಲ್ಲಿ ಹುಡುಕಾಟ ನಡೆಸಿದಾಗ ನೀರಿನಲ್ಲಿ ಶವ ಪತ್ತೆಯಾಗಿದೆ. ಇಬ್ಬರ ಬಾಯಿ ಭಾಗಕ್ಕೆ ನೀರಿನೊಳಗೆ ಕಲ್ಲು ತಾಗಿದ ಪರಿಣಾಮ ಗಾಯವಾಗಿದೆ.

ಶಂಕರನಾರಾಯಣ ಎಸ್‌ಐ ಶ್ರೀಧರ ನಾಯ್ಕ ಹಾಗೂ ಸಿಬ್ಬಂದಿ ಸ್ಥಳಕ್ಕಾಗಮಿಸಿ ಮಹಜರು ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net