ಆರ್ದಶ ಜೀವನ ನಡೆಸಿ ಮಾದರಿಯಾಗಿ

11 yeri swamy 01
ಕುರುಗೋಡು ಸಮೀಪದ ಬಾದನಹಟ್ಟಿ ಗ್ರಾಮದಲ್ಲಿ ಆಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹದಲ್ಲಿ ಐದು ಜೋಡಿ ವಧುವರರು ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದರು. ಕರಿಬಸವನ ಗೌಡ ಶರಣರು, ರಾಮ್ಬಾಬು ಗುರೂಜಿ, ಆರ್.ಗೋವಿಂದ ರೆಡ್ಡಿ, ಗುರುಸ್ವಾಮಿ ಶಪೂರ್,ಮಲ್ಲಿಕಾರ್ಜುನ ಸ್ವಾಮಿ, ಗುರುಸ್ವಾಮಿ ಸಿ.ನಾಗರಾಜ, ಬಸಪ್ಪ ಇದ್ದರು.
Published on

ಕುರುಗೋಡು: ಸಾಮಾಜಿಕ ಪಿಡುಗಾಗಿರುವ ಜಾತಿಭೇದ ಹೋಗಲಾಡಿಸಿ ಸಮಾನತೆ ಸಾರಲು ಉಚಿತ ಸಾಮೂಹಿಕ ವಿವಾಹಗಳು ಸಹಕಾರಿಯಾಗಿವೆ ಎಂದು ಕರಿಬಸವನ ಗೌಡ ಶರಣರು ಹೇಳಿದರು.

ತಾಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ಶ್ರೀ ಅಯ್ಯಪ್ಪ ಸೇವಾ ಸಮಿತಿ ಮತ್ತು ರಾಮ್ಬಾಬು ಗುರುಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ಶಿಷ್ಯಬಳಗದಿಂದ ಬುಧವಾರ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದ ವಧುವರರು ಸಮಾಜದಲ್ಲಿ ಆರ್ದಶ ಜೀವನ ನಡೆಸುವಂತೆ ಸಲಹೆ ನೀಡಿದರು.

ರಾಮ್ಬಾಬು ಗುರೂಜಿ ಮಾತನಾಡಿ, ಅಯ್ಯಪ್ಪ ಸ್ವಾಮಿ ಸೇವಾಸಮಿತಿ ವತಿಯಿಂದ ಉಚಿತ ಸಾಮೂಹಿಕ ವಿವಾಹ ಆಯೋಜಿಸಿ ಬಡ ಕುಟುಂಬಗಳಿಗೆ ಸಹಾಯ ಹಸ್ತ ಚಾಚಿರುವುದು ಉತ್ತಮ ಬೆಳವಣಿಗೆ. ಉಚಿತ ಸಾಮೂಹಿಕ ವಿವಾಹಗಳಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಜತೆಗೆ ಬಡವ-ಶ್ರೀಮಂತ ಎನ್ನುವ ಭೇದಭಾವ ಹೋಗಲಾಡಿಸಲು ಸಹಕಾರಿಯಾಗುತ್ತದೆ ಎಂದರು. 5 ಜೋಡಿ ವಧು-ವರರು ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net