ಪುರಾತತ್ವ ಅಧ್ಯಯನವು ಕಲೆ, ವಿಜ್ಞಾನಗಳ ಸಮ್ಮಿಲನ: ಡಾ.ರಂಗರಾಜು

4 HPT 4
Published on

ಹೊಸಪೇಟೆ: ಪುರಾತತ್ವ ಅಧ್ಯಯನವು ಕಲೆಯೂ ವಿಜ್ಞಾನವೂ ಹೌದು. ಇದು ಕಲಾ ವಿಭಾಗದಿಂದ ರಾಜ್ಯಶಾಸ್ತç, ಭೂಗೋಳ ಶಾಸ್ತç, ಮಾನವಶಾಸ್ತç, ಸಮಾಜಶಾಸ್ತç ವಿಷಯಗಳು ಮತ್ತು ವಿಜ್ಞಾನ ವಿಭಾಗದಿಂದ ಭೌತಶಾಸ್ತç, ಸಸ್ಯಶಾಸ್ತç, ಜೀವಶಾಸ್ತç, ಪ್ರಾಣಿಶಾಸ್ತç ವಿಷಯಗಳ ಸಂಯೋಗ ಎಂದು ಮೈಸೂರು ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ.ಎನ್.ಎಸ್.ರಂಗರಾಜು ಅಭಿಪ್ರಾಯಪಟ್ಟರು.

ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ, ಭಾರತ ಸರ್ಕಾರದ ಉನ್ನತ ಶಿಕ್ಷಣ ಸಚಿವಾಲಯ, ಶಾಸ್ತಿçÃಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಮೈಸೂರು ಸಹಯೋಗದಲ್ಲಿ ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕರ್ನಾಟಕದಲ್ಲಿ ಪುರಾತತ್ವ ಅಧ್ಯಯನ ಪ್ರಾರಂಭಿಕ ಪ್ರಯತ್ನಗಳ ಕುರಿತು ಪ್ರಚಾರೋಪನ್ಯಾಸ ಮಾಲೆಯನ್ನು ಉದ್ಘಾಟಿಸಿ ಮಾತನಾಡಿದರು.

ಪುರಾತತ್ವ ಅಧ್ಯಯನವು ಉತ್ಖನನ, ಭೂ ಪರಿಶೋಧನೆ, ಶಾಸನಶಾಸ್ತç, ನಾಣ್ಯಶಾಸ್ತç, ದೇವಾಲಯ ಕಲೆ ಮತ್ತು ವಾಸ್ತುಶಿಲ್ಪ ಅಧ್ಯಯನ ಎಂಬ ಐದು ಭಾಗಗಳನ್ನು ಒಳಗೊಂಡಿರುವುದು. ಕರ್ನಾಟಕದಲ್ಲಿ ರಾರ್ಬಟ್ ಬ್ರೂಸ್ ಅವರು ಮೊದಲು ಕ್ಷೇತ್ರ ಕಾರ್ಯವನ್ನು ಆರಂಭಿಸಿದರು. ಮಡಿಕೇರಿಯಲ್ಲಿ ಮೊದಲ ಬಾರಿಗೆ ಕುತೂಹಲಕ್ಕಾಗಿ ಕ್ಯಾಪ್ಟನ್ ಕೋಲೆ ಅವರು ಉತ್ಖನನ ಮಾಡಿದರು. ನಂತರ ಮೆಕಂಜಿ ಅವರು ಈ ಬಗ್ಗೆ ಮತಷ್ಟು ಉತ್ಖನನ ಮಾಡಿದಾಗ ರೋಮನ್ ಕಾಲದ ಮೂರು ರೀತಿಯ ಮಡಿಕೆ ಚೂರುಗಳು ದೊರೆತಿದ್ದವು.
ಸರ್ ಮಾರ್ಟಿಮನ್ ವಿಲ್ಲರ್ ಅವರು ವೈಜ್ಞಾನಿಕವಾಗಿ ಉತ್ಖನನ ಪ್ರಾರಂಭಿಸಿದರು. ಶಾಸನಶಾಸ್ತç ವಿಭಾಗದಲ್ಲಿ ಬಿ.ಎಲ್. ರೈಸ್ ರವರ ಕೊಡುಗೆ ಅಪಾರ. ಪರ್ಶಿಬ್ರೌನ್ ಆರಂಭದಲ್ಲಿ ಕಲೆ ಮತ್ತು ವಾಸ್ತುಶಿಲ್ಪ ವಿಭಾಗದಲ್ಲಿ ಹಿಂದೂ -ಬೌದ್ಧ ಶೈಲಿ, ಇಸ್ಲಾಮಿಕ್ ಶೈಲಿಯನ್ನು ವಿಗಂಡಿಸುವಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ನಾಣ್ಯಶಾಸ್ತç ವಿಭಾಗದಲ್ಲಿ ಪಿ.ಎಲ್.ಗುಪ್ತ, ಪ್ರೊ.ಎ.ವಿ. ನರಸಿಂಹ ಮೂರ್ತಿ ಸೇರಿದಂತೆ ಹಲವಾರು ಜನರು ಪ್ರಾರಂಭಿಕ ಹಂತದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಪುರಾತತ್ವ ಅಧ್ಯಯನಕ್ಕೆ ಸಂಬAಧಪಟ್ಟ ಕೆಲಸಗಳನ್ನು ಮುಂದುವರೆಸಿಕೊAಡು ಹೋಗುವುದು ಇಂದಿನ ಯುವ ಸಂಶೋಧಕರ ಜವಾಬ್ದಾರಿ ಎಂದು ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಅಧ್ಯಕ್ಷತೆವಹಿಸಿ ಮಾತನಾಡಿ, ಪುರಾತತ್ವ ಅಧ್ಯಯನ ಬ್ರಿಟಿಷರಿಂದ ಆರಂಭವಾಯಿತು. ಇಡೀ ಭಾರತದಲ್ಲಿ ಪುರಾತತ್ವದ ಅಧ್ಯಯನ ಹೆಚ್ಚಾಗಿ ನಡೆದಿದ್ದು ಕರ್ನಾಟಕದಲ್ಲಿ. ಕನ್ನಡ ಸಾಹಿತ್ಯದಲ್ಲಿ ಉತ್ಖನನದ ಉಲ್ಲೇಖಿವಿದೆ. ಇದು ಆ ಕಾಲದಲ್ಲೇ ಉತ್ಖನನದ ಬಗ್ಗೆ ಜನರಲ್ಲಿ ಪ್ರಜ್ಞೆಯಿತ್ತು ಎಂಬುದನ್ನು ವಚನ ಸಾಹಿತ್ಯದಲ್ಲಿ ಕಾಣಬಹುದು ಎಂದರು.

ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಎನ್.ಎಂ.ತಳವಾರ, ಡಾ.ಡಿ.ವಿ.ಪರಮಶಿವಮೂರ್ತಿ, ಡಾ.ವಾಸುದೇವ ಬಡಿಗೇರ, ಕುಲಸಚಿವ ಡಾ.ಸುಬ್ಬಣ್ಣ ರೈ ವೇದಿಕೆ ಮೇಲೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net