ಆಸಂದಿ ಗ್ರಾಮಕ್ಕೆ ಪುರಾತತ್ವ ಇಲಾಖೆ ಅಧಿಕಾರಿಗಳ ಭೇಟಿ

3 kdr 2
Published on

ಕಡೂರು: ತಾಲೂಕಿನ ಐತಿಹಾಸಿಕ ಆಸಂದಿ ಗ್ರಾಮದ ತ್ರಿವಳಿ ದೇವಸ್ಥಾನಕ್ಕೆ ಮೈಸೂರಿನ ರಾಜ್ಯಪುರಾತತ್ವ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಪುರಾತತ್ವ ಇಲಾಖೆಯಿಂದ ಆಸಂದಿಯಲ್ಲಿರುವ ಗಂಗರ ಕಾಲದ ವೇದೇಶ್ವರ, ಚಂಡಿಕೇಶ್ವರ,ನಖರೇಶ್ವರ ತ್ರಿವಳಿ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಲಾಗಿದೆ. ಈ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಇಲಾಖೆಯ ಗಮನಕ್ಕೆ ತಾರದೆ ಶಿಷ್ಟಾಚಾರ ಉಲ್ಲಂಘಿಸಿ ಏಕಪಕ್ಷೀಯವಾಗಿ ಫೆ.2ರಂದು ನಿಗದಿಪಡಿಸಿದ್ದು ಹಲವರ ಆಕ್ಷೇಪಣೆಗೆ ಕಾರಣವಾಗಿತ್ತು.

ತರೀಕೆರೆ ಉಪ ವಿಭಾಗಾಧಿಕಾರಿ ಡಾ.ಕಾಂತರಾಜು ಭೇಟಿ ನೀಡಿ ಕಾರ್ಯಕ್ರಮ ಆಯೋಜಕರ ಜತೆ ಚರ್ಚಿಸಿದರೂ ಫಲಪ್ರದವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕಿ ರೇಖಾ ಮತ್ತು ಪುರಾತತ್ವ ಸಂರಕ್ಷಣಾಧಿಕಾರಿ ಪುಟ್ಟಸ್ವಾಮಿ ಆಸಂದಿಗೆ ಭೇಟಿ ನೀಡಿ ಮಾತನಾಡಿ, ಪುರಾತತ್ವ ಇಲಾಖೆ ಸುಪರ್ದಿಯಲಿದ್ದು, ಇದರ ಪುನರ್ ಪ್ರತಿಷ್ಟಾಪನೆ ಕಾರ್ಯವನ್ನೂ ಇಲಾಖೆ ನಡೆಸಲಾಗಿದೆ. ಯಾವುದೇ ಕಾರ್ಯಕ್ರಮ ನಡೆದರೂ ಶಿಷ್ಟಾಚಾರದಂತೆ ನಡೆಯಬೇಕು.ಅದನ್ನು ಮೀರಲು ಸಾಧ್ಯವಿಲ್ಲ ಎಂದರು.

ದೇವಸ್ಥಾನ ಜೀರ್ಣೋದ್ಧಾರಕ್ಕೆ ಮುನ್ನ ದೇವರ ಕಳಾಕರ್ಷಣೆ ಮಾಡಿದ್ದ ಕುಂಬಗಳನ್ನು ಮತ್ತೆ ದೇವಸ್ಥಾನದೊಳಗೆ ಇರಿಸಲಾಯಿತು. ಪುನರ್ ಪ್ರತಿಷ್ಠಾಪನೆ ಕಾರ್ಯವನ್ನು ಶೀಘ್ರದಲ್ಲಿ ಸಂಪ್ರದಾಯ ಬದ್ದವಾಗಿ ನಡೆಸಲಾಗುವುದು ಎಂದರು.

ಪ್ರಭಾರ ತಹಸೀಲ್ದಾರ್ ಎನ್.ಆರ್. ಮಂಜುನಾಥ ಸ್ವಾಮಿ, ಅಜ್ಜಂಪುರ ಪಿಎಎಸ್‌ಎಸ್.ವೀರೇಂದ್ರ, ಚೌಳಹಿರಿಯೂರು ಕಂದಾಯಾಧಿಕಾರಿ ಗಿರೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net