ಮನಬಂದಂತೆ ಆದಾಯ ಮಿತಿ ನಿಗದಿ

18 gkp 004
ಕುಪ್ಪಣಮಾಡ ನಿವ್ಯಾ ಕಾವೇರಮ್ಮ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆ.
Published on

ಗ್ರಾಮಸಭೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ

ಗೋಣಿಕೊಪ್ಪಲು : ಆದಾಯ ದೃಢೀಕರಣ ಪತ್ರದ ವಿಲೇವಾರಿಯಲ್ಲಿ ವಿಳಂಬ ಮತ್ತು ಅಧಿಕಾರಿಗಳು ಮನಬಂದಂತೆ ಆದಾಯ ಮಿತಿ ಹಾಕುತ್ತಿರುವುದರಿಂದ ಅರ್ಹ ವಿದ್ಯಾರ್ಥಿಗಳಿಗೆ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಾಗಲು ತೊಡಕಾಗಿದೆ ಎಂದು ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.

ಹುದಿಕೇರಿ ಗ್ರಾಮ ಪಂಚಾಯಿತಿ ಗ್ರಾಮ ಸಭೆ ಮಂಗಳವಾರ ಕೊಡವ ಸಮಾಜ ಆವರಣದಲ್ಲಿ ಅಧ್ಯಕ್ಷೆ ಕುಪ್ಪಣಮಾಡ ನಿವ್ಯಾ ಕಾವೇರಮ್ಮ ಅದ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಗೈರು ಗ್ರಾಮಸ್ಥರನ್ನು ಕೆರಳಿಸಿತು. ಅಧಿಕಾರಿಗಳು ಮನಬಂದಂತೆ ಆದಾಯ ಮಿತಿ ಹಾಕುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೂಳ್ಳುವಂತೆ ಒತ್ತಾಯಿಸಿದರು. ಇದಕ್ಕೆ ಅಧಿಕಾರಿಗಳು ಸೂಕ್ತ ಉತ್ತರ ನೀಡಲು ವಿಫಲರಾದರು.

ಹುದಿಕೇರಿ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಸುಸಜ್ಜಿತ ಪ್ರಯೋಗಾಲಯವಿದೆ, ಆದರೆ ಸೂಕ್ತ ಸಿಬ್ಬಂದಿಯನ್ನು ಇದುವರೆಗೂ ನಿಯೋಜಿಸಿಲ್ಲ ಎಂದು ವಿವಿಧ ಗ್ರಾಮಗಳ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಶೀಘ್ರದಲ್ಲಿ ಸಮಸ್ಯೆ ಪರಿಹಾರ ಮಾಡುವಂತೆ ಒತ್ತಾಯಿಸಿದರು. ಹುದಿಕೇರಿ ಅಯ್ಯಂಗಾಡು ರಸ್ತೆ, ಕೇಕಿಂತೋಡು ತೋಡಿನ ಹೂಳೆತ್ತುವ ಕಾಮಗಾರಿ ಮತ್ತು ಚಂಗುಲಂಡ ಕುಟುಂಬಸ್ಥರ ರಸ್ತೆ ಅಭಿವೃದ್ಧಿಗೆ ಒತ್ತಾಯಿಸಲಾಯಿತು. ಈ ಬಗ್ಗೆ ಅಧ್ಯಕ್ಷರು ಪ್ರತಿಕ್ರಿಯಿಸಿ ಮುಂದಿನ ದಿನಗಳಲ್ಲಿ ಈ ಕಾಮಗಾರಿಗೆ ಅನುಮೋದನೆ ನೀಡುವುದಾಗಿ ಭರವಸೆ ನೀಡಿದರು.

ತಾಪಂ ಇಒ ಪುಟ್ಟರಾಜು ಮಾತನಾಡಿ, 15 ನೇ ಹಣಕಾಸು ಯೋಜನೆಗೆ 38 ಲಕ್ಷ ರೂ., ನರೇಗಾ ಯೋಜನೆಗೆ 54 ಲಕ್ಷ ರೂ., ಪಂಚಾಯಿತಿ ಅಭಿವೃದ್ಧಿ ಯೋಜನೆಯಡಿ 10 ಲಕ್ಷ ರೂ. ಯೋಜನೆ, ಎಸ್‌ಬಿಎಂ ಬೈಲಾ ಅನುಮೋದನೆ, ವಾಣಿಜ್ಯ ಚಟುವಟಿಕೆಗೆ ಪ್ರತ್ಯೇಕ ದರ ವಿಧಿಸಲಾಗುವುದು. ಪಂಚಾಯತ್ ಸಂಪನ್ಮೂಲ ಕ್ರೋಡೀಕರಣ ಮಾಡುವ ಉದ್ದೇಶದಿಂದ ಕಟ್ಟಡ ಮತ್ತು ನಿವೇಶನಗಳಿಗೂ ತೆರಿಗೆ ವಿಧಿಸುವ ಅನುಮೋದನೆ ನೀಡಲಾಗಿದೆ ಎಂದರು.

ಸಭೆಯಲ್ಲಿ ನೋಡಲ್ ಅಧಿಕಾರಿ ಕಾರ್ಯಪಾಲಕ ಇಂಜಿನಿಯರ್ ವಿ.ಎಸ್.ಮಹದೇವ್, ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net