ಅರವಿಂದ ಬೋಳಾರ್‌ ನಟನೆಗೆ ಜಿಲ್ಲಾಧಿಕಾರಿ ಮೆಚ್ಚುಗೆ

Bolar 1
Published on

ಮಂಗಳೂರು: ತುಳು ಚಲನಚಿತ್ರ ರಂಗದ ಖ್ಯಾತ ನಟ ಹಾಗೂ ರಂಗಭೂಮಿ ಕಲಾವಿದ ಅರವಿಂದ್ ಬೋಳಾರ್ ಅವರ ನಟನಾ ಕೌಶಲ್ಯಕ್ಕೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಸೋಮವಾರ ಜಿಲ್ಲಾಧಿಕಾರಿಯವರ ಕಚೇರಿಗೆ ಭೇಟಿ ನೀಡಿದ ಕಲಾವಿದ ಅರವಿಂದ ಬೋಳಾರ್ ಅವರೊಂದಿಗೆ ಜಿಲ್ಲಾಧಿಕಾರಿ ಕೆಲ ಹೊತ್ತು ಮಾತುಕತೆ ನಡೆಸಿದರು. ಬೋಳಾರ್ ಅವರ ನಟನಾ ಶೈಲಿ, ಡೈಲಾಗ್ ಡೆಲಿವರಿ ಹಾಗೂ ಅವರ ವೃತ್ತಿಯನ್ನು ಪ್ರಶಂಶಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಈ ವೇಳೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net