

ಚಿತ್ರದುರ್ಗ: ಹಸಿವು, ಅವಮಾನ, ಬಡತನವನ್ನು ಅರಿತು ಎಲ್ಲ ವರ್ಗದ ಜನರಿಗೂ ಶೈಕ್ಷಣಿಕ, ರಾಜಕೀಯ, ಸಾಮಾಜಿಕ ನ್ಯಾಯ ಕಲ್ಲಿಸಿದ ದೇವರಾಜ ಅರಸು ಬಹದೊಡ್ಡ ಹರಿಕಾರರು ಎಂದು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಜಿಲ್ಲಾಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಬಣ್ಣಿಸಿದರು.
ನಗರದ ಕೋಟೆನಾಡು ಬುದ್ಧ ವಿಹಾರದಲ್ಲಿ ಭಾನುವಾರ ಆಯೋಜಿಸಿದ್ದ ದೇವರಾಜ ಅರಸರ ಜನ್ಮದಿನಾಚರಣೆಯಲ್ಲಿ ಮಾತನಾಡಿ, ಅರಸು ಅವರು ಹಿಂದುಳಿದ ವರ್ಗಗಳಿಗೆ ನೀಡಿದ ವಿವಿಧ ಸೌಲಭ್ಯಗಳ ಅವಕಾಶಗಳನ್ನು ಬಳಸಿಕೊಂಡು ಸಮಾನತೆಯ ಪ್ರಬುದ್ಧ ಭಾರತವನ್ನು ನಿರ್ಮಿಸಬೇಕಿದೆ. ಸಮಸ್ಯೆಗಳ ವಿರುದ್ಧ ಶೋಷಿತ ಹಾಗೂ ಹಿಂದುಳಿದ ವರ್ಗಗಳು ಸಂಘಟಿತವಾಗಿ ಹೋರಾಟ ನಡೆಸಬೇಕಿದೆ ಎಂದರು.
ಪರಿಷತ್ ಕಾರ‌್ಯದರ್ಶಿ ಜಿ.ಶಾಂತಮ್ಮ ತಿಪ್ಪೇಸ್ವಾಮಿ, ಪ್ರಾಚಾರ್ಯೆ ಸಿದ್ದಲಿಂಗಮ್ಮ ಮಾತನಾಡಿದರು. ಬಿಎಸ್‌ಐ ಜಿಲ್ಲಾ ಕಾರ‌್ಯದರ್ಶಿ ಶಕುಂತಲಮ್ಮ, ಬೆಸ್ಕಾಂ ತಿಪ್ಪೇಸ್ವಾಮಿ, ವಕೀಲ ಬೇನಕನಹಳ್ಳಿ ಚಂದ್ರಪ್ಪ, ಉಪಾನ್ಯಾಸಕ ಮಂಜು, ದುರ್ಗೇಶಪ್ಪ, ಇಂದೂಧರ್, ಗೌತಮ್, ರಮೇಶ್ ಮತ್ತಿತರರು ಇದ್ದರು.