ಆಡಳಿತ ಸುಧಾರಣೆ ತಂದ ಧೀಮಂತ ರಾಜಕಾರಣಿ

20HDK0003
Published on

 ಎಚ್.ಡಿ.ಕೋಟೆ : ಸಾಮಾಜಿಕ ಕ್ರಾಂತಿಯ ಮೂಲಕ ರಾಜ್ಯದಲ್ಲಿ ಆಡಳಿತ ಸುಧಾರಣೆ ತಂದ ಧೀಮಂತ ರಾಜಕಾರಣಿ ಡಿ.ದೇವರಾಜ ಅರಸು ಎಂದು ಪಶುಸಂಗೋಪನೆ ಸಹಾಯಕ ನಿರ್ದೇಶಕ ಡಾ.ವೈ.ಡಿ. ರಾಜಣ್ಣ ತಿಳಿಸಿದರು. ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ದೇವರಾಜು ಅರಸು ಅವರ

110 ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.  ತಹಸೀಲ್ದಾರ್ ಶ್ರೀನಿವಾಸ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನರಿಗೆ ಸಮಾನತೆ ಅವಕಾಶ ದೊರಕಿಸಿಕೊಡುವಲ್ಲಿ ಸಂವಿಧಾನದ ಆಶಯಗಳನ್ನು ರಾಜ್ಯದಲ್ಲಿ ಜಾರಿಗೆ ತರುವಲ್ಲಿ ಅರಸು ಅವರ ಪಾತ್ರ ದೊಡ್ಡದು ಎಂದರು.

ಸನ್ಮಾನ: ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಚಿರಂತ್, ಸಾಹಿತ್ಯ, ಯಶೋದಾ ಮತ್ತು ದೇವಿಕಾ ಅವರನ್ನು ಸನ್ಮಾನಿಸಲಾಯಿತು. ವಿವಿಧ ವಿದ್ಯಾರ್ಥಿ ನಿಲಯಗಳಲ್ಲಿ ಆಯೋಜಿಸಿದ್ದ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಲಾಯಿತು.

ತಾಪಂ ಇಒ ಧರಣೀಶ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶಶಿಕಲಾ, ಸರಗೂರು ತಹಸೀಲ್ದಾರ್ ಪರಶಿವಮೂರ್ತಿ, ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಲಿಂಗರಾಜು, ಎಸ್ಸೈ ಕಿರಣ್, ಪಟ್ಟಣ ಪಂಚಾಯತಿ ಸದಸ್ಯೆ ಸಣ ್ಣತಾಯಮ್ಮ, ತೋಟದ ಬೆಳಗಾರರ ಸಹಕಾರ ಸಂಘದ ಅಧ್ಯಕ್ಷ ನಂದೀಶ್, ಬೆಳ್ತೂರು ಮಹೇಶ್, ಚೌಡಳ್ಳಿ ಜವರಯ್ಯ, ಮುಖಂಡರಾದ ಬಸವರಾಜು, ಎಚ್ ಕೆ ಪ್ರಕಾಶ್ ಅನುಷಾ, ನಿಲಯಪಾಲಕರಾದ ರತ್ನಯ್ಯ, ಮಹಾದೇವನಾಯಕ, ಜಯಂತಿ, ಸುವರ್ಣಾ, ಗಾಯತ್ರಿ, ಲಕ್ಷ್ಮೀಕುಮಾರ್, ಮೋಹನ್ ದಾಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net