ಉಚ್ಚಂಗಿದುರ್ಗದ ಉತ್ಸವಾಂಬಾ ಹುಂಡಿಯಲ್ಲಿ 26 ಲಕ್ಷ ರೂ. ಸಂಗ್ರಹ

Uchchangidurga Hundi Collection
ಅರಸೀಕೆರೆ ಸಮೀಪದ ಉಚ್ಚಂಗಿದುರ್ಗದ ಉತ್ಸವಾಂಬಾ ದೇವಸ್ಥಾನದಲ್ಲಿ ಹುಂಡಿ ಹಣ ಎಣಿಕೆ ನಡೆಯಿತು.
Published on

ಅರಸೀಕೆರೆ (ಹರಪನಹಳ್ಳಿ ತಾ): ಇಲ್ಲಿನ ಐತಿಹಾಸಿಕ ಧಾರ್ಮಿಕ ಕ್ಷೇತ್ರ ಉಚ್ಚಂಗಿದುರ್ಗದ ಉತ್ಸವಾಂಬಾ ದೇವಸ್ಥಾನದಲ್ಲಿ ಗುರುವಾರ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದ್ದು, 23,74,330 ರೂ. ಹಾಗೂ ದಾಸೋಹ ಹುಂಡಿಯಲ್ಲಿ 2,29,800 ರೂ. ಸೇರಿ ಒಟ್ಟು 26,04,130 ರೂ. ಸಂಗ್ರಹವಾಗಿದೆ.

ಬೆಳಗ್ಗೆ 9 ರಿಂದ ಸಂಜೆ 6ಗಂಟೆವರೆಗೆ ಎಣಿಕೆ ಕಾರ್ಯ ನಡೆಯಿತು. ದೇಶಾದ್ಯಂತ ಕರೊನಾ ಹೆಚ್ಚಾದ ಕಾರಣ ಯುಗಾದಿ ಜಾತ್ರೆ ಹಾಗೂ ಹುಣ್ಣಿಮೆಗೆ ಬರಲು ಭಕ್ತರಿಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಹುಂಡಿಯಲ್ಲಿನ ಕಾಣಿಕೆ ಕಡಿಮೆಯಾಗಿದೆ. ಸಂಗ್ರಹವಾದ ಹಣವನ್ನು ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಪ್ಪ ತಿಳಿಸಿದರು. ಮೈಲಾರಲಿಂಗೇಶ್ವರ ದೇವಸ್ಥಾನದ ಇಒ ಗಂಗಾಧರ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ಸೋಮಶೇಖರ್, ಅರ್ಚಕರಾದ ಎಂ.ಹಾಲೇಶ್, ಗುಮಾಸ್ತ ರಮೇಶ್, ಪೊಲೀಸ್ ಇಲಾಖೆ, ಸೇವಾದಳ ಹಾಗೂ ಮುಜುರಾಯಿ ಇಲಾಖೆ ಸಿಬ್ಬಂದಿ, ಅರ್ಚಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net