ಸ್ತ್ರೀ ಸಬಲೀಕರಣದಿಂದ ದೇಶದ ಪ್ರಗತಿ

1 Arasi- SDM
Published on

ಅರಸೀಕೆರೆ : ಸ್ತ್ರೀ ಸಬಲೀಕರಣದಿಂದ ದೇಶದ ಪ್ರಗತಿ ಸಾಧ್ಯವಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಜಿಲ್ಲಾ ಯೋಜನಾ ನಿರ್ದೇಶಕಿ ಮಮತಾ ಹರೀಶ ರಾವ್ ಹೇಳಿದರು. ನಗರದ ಸೇವಾಲಾಲ್ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಸಮಾವೇಶ ಹಾಗೂ ವಿಚಾರ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ಒಂದು ಕಾಲದಲ್ಲಿ ಕೇವಲ ಅಡುಗೆ ಮನೆಗೆ ಸೀಮಿತವಾಗಿದ್ದ ಹೆಣ್ಣು

ಂದು ಅಧಿಕಾರ ನಡೆಸುವ, ವಿವಿಧ ವ್ಯವಸ್ಥೆಗಳನ್ನು ಸಮರ್ಥವಾಗಿ ನಿರ್ವಹಿಸುವ ಮಟ್ಟಕ್ಕೆ ಏರಿದ್ದಾಳೆ. ಅಲ್ಲಿ ಯಶಸ್ಸು ಸಾಧಿಸಬಹುದು ಎಂಬುದನ್ನೂ ಸಾಬೀತು ಮಾಡಿದ್ದಾಳೆ. ಶಿಕ್ಷಣದ ಜತೆಗೆ ಆರ್ಥಿಕ ಶಕ್ತಿ ತುಂಬಿದರೆ ಬಲಿಷ್ಠ ಸಮಾಜವನ್ನು ಸ್ತ್ರೀಯರು ಕಟ್ಟಬಲ್ಲರು. ಇದನ್ನು ಅರಿತ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಗ್ರಾಮೀಣ ಪ್ರದೇಶಗಳಲ್ಲಿ ಸ್ವ ಸಹಾಯ ಸಂಘ ಸ್ಥಾಪಿಸಿ, ನೆರವು ನೀಡುತ್ತಾ ಬಂದಿದೆ. ಸಂಸ್ಥೆಯಿಂದ ದೊರೆಯುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಮಹಿಳೆಯರು ಪ್ರಗತಿ ಹೊಂದಬೇಕು ಎಂದು ಮಮತಾ ಹರೀಶ ರಾವ್ ಹೇಳಿದರು.

ಕೀಳರಿಮೆಯಿಂದ ಹೊರಬನ್ನಿ: ಉಪನ್ಯಾಸಕಿ ಸುಧಾ ಕಲ್ಯಾಣ್ ಮಾತನಾಡಿ, ಮಹಿಳೆಯರು ನನ್ನಿಂದಾಗದು ಎನ್ನುವ ಕೀಳರಿಮೆಯಿಂದ ಹೊರಬರಬೇಕು ಎಂದರು. ದುಡಿಯುವ ಕೈಗಳಿಗೆ ಧರ್ಮಸ್ಥಳ ಸಂಸ್ಥೆ ನೆರವಿನ ಹಸ್ತ ನೀಡಿದೆ. ನಗರ ಹಾಗೂ ಗ್ರಾಮೀಣ ಭಾಗದ ಮಹಿಳೆಯರು ಸಂಘದ ಪ್ರಯೋಜನ ಪಡೆದು ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಪಂ ಮಾಜಿ ಸದಸ್ಯೆ ಸುಲೋಚನಾ ಬಾಯಿ ಮಾತನಾಡಿ, ಜ್ಞಾನ ವಿಕಾಸ ಕೇಂದ್ರ ತೆರೆಯುವ.ಮೂಲಕ

ಹೆಣ್ಣುಮಕ್ಕಳನ್ನು ಒಂದೆಡೆ ಸೇರಿಸಿ ಬಲ ತುಂಬುತ್ತಿರುವ ಸಂಸ್ಥೆ ಸೇವೆ ಶ್ಲಾಘನೀಯ ಎಂದರು. ಮದ್ಯವರ್ಜನ ಶಿಬಿರ, ಕೃಷಿ ಪರಿಕರಗಳ ವಿತರಣೆ, ಹೈನುಗಾರಿಕೆಗೆ ಪ್ರೋತ್ಸಾಹ ಸೇರಿದಂತೆ ವಿವಿಧ ರೀತಿಯ ಚಟುವಟಿಕೆಗಳು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ನಡೆಯುತ್ತಿರುವುದು ಪ್ರಗತಿ ಸೂಚಕ ಎಂದರು. ಯೋಜನೆಯ ತಾಲೂಕು ನಿರ್ದೇಶಕಿ ಅಕ್ಷತಾ ರೈ, ಡಾ.ಶಿವಕುಮಾರ, ವೆಂಕಟೇಶ, ಎಚ್. ಡಿ.ಸೀತಾರಾಮ್ ಸೇರಿದಂತೆ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net