ದನದ ಮಾಂಸ ಮಾರುತ್ತಿದ್ದ ಮೂವರ ಬಂಧನ

13arsph1ep
Published on

ಅರಸೀಕೆರೆ: ನಗರದ ಮಟನ್ ಮಾರ್ಕೆಟ್ ಬಡಾವಣೆಯಲ್ಲಿ ಜಾನುವಾರು ಮಾಂಸ ಮಾರಾಟದಲ್ಲಿ ತೊಡಗಿದ್ದ ಮೂವರು ಕಸಾಯಿಖಾನೆ ಮಾಲೀಕರನ್ನು ಪೊಲೀಸರು ಬಂಧಿಸಿದ್ದಾರೆ.


ಶಹಬಾಜ್(28),ಅಪ್ರೋಜ್(35), ರೆಹಮಾನ್ (30) ಬಂಧಿತರು. ಪ್ರಾಣಿ ದಯಾ ಸಂಘದ ಮುಖಂಡರು ನೀಡಿದ ದೂರಿನ ಹಿನ್ನೆಲೆಯಲ್ಲಿ ನಗರಸಭಾ ಸಿಬ್ಬಂದಿಯೊಂದಿಗೆ ದಾಳಿ ನಡೆಸಿದ ಪೊಲೀಸರು, ಬಂಧಿತರ ಕಸಾಯಿಖಾನೆಗಳಿಂದ 300 ಕೆ.ಜಿ. ದನದ ಮಾಂಸ ವಶಕ್ಕೆ ಪಡೆದಿದ್ದಾರೆ. ಮೂರು ಎಮ್ಮೆ, ಮೂರು ಹಸು ಹಾಗೂ ಕರುಗಳನ್ನು ರಕ್ಷಿಸಿದ್ದಾರೆ. ಜಾನುವಾರು ಹತ್ಯೆಗೆ ಬಳಸುತ್ತಿದ್ದ ಪರಿಕರಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.


ಅನಿಮಲ್ ವೆಲ್‌ಫೇರ್ ಬೋರ್ಡ್ ಆಫ್ ಇಂಡಿಯಾದ ನಂದಿನಿ ಮಟಿಯಾನಿ ಈ ಬಗ್ಗೆ ಲಿಖಿತ ದೂರು ನೀಡಿದ್ದರು. ನಗರ ಠಾಣೆ ಇನ್ಸ್‌ಪೆಕ್ಟರ್ ಚಂದ್ರಶೇಖರಯ್ಯ, ಪಿಎಸ್‌ಐ ತಿಮ್ಮಯ್ಯ, ನಗರಸಭಾ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net