ಕೆರೆ ಒತ್ತುವರಿ ತೆರವಿಗೆ ಕಾರ್ಯೋನ್ಮುಖರಾಗಿ

12arsph3ep
Published on

ಅರಸೀಕೆರೆ: ಕೆರೆ ಒತ್ತುವರಿ ತೆರವುಗೊಳಿಸಲು ಅಧಿಕಾರಿಗಳು ಸಮರೋಪಾದಿಯಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಲೋಕಾಯುಕ್ತ ಡಿವೈಎಸ್ಪಿ ಭಾನು ಖಡಕ್ ಸೂಚನೆ ನೀಡಿದರು.


ಒತ್ತುವರಿ ತೆರವು ಸಂಬಂಧ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಆದೇಶ ನೀಡಿರುವ ಹಿನ್ನೆಲೆಯಲ್ಲಿ ತಾಲೂಕಿನ ನಾಗತಿಹಳ್ಳಿ ಕೆರೆಗೆ ಬುಧವಾರ ಮಧ್ಯಾಹ್ನ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ಕಂದಾಯ, ಸಣ್ಣ ನೀರಾವರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ಕೆರೆಗಳ ಒತ್ತುವರಿ ತೆರವುಗೊಳಿಸಬೇಕು ಎನ್ನುವ ಸರ್ಕಾರದ ದೃಢ ಸಂಕಲ್ಪಕ್ಕೆ ಎಲ್ಲರೂ ಬದ್ಧರಾಗಿ ಕೆಲಸ ಮಾಡಬೇಕು. ಪ್ರಾಥಮಿಕ ಹಂತದಲ್ಲಿ ಒತ್ತುವರಿದಾರರಿಗೆ ಸ್ವಯಂಪ್ರೇರಿತರಾಗಿ ಜಾಗ ತೆರವುಗೊಳಿಸಲು ಸೂಚನೆ ನೀಡಬೇಕು. ಜತೆಗೆ ತಾಲೂಕಿನಾದ್ಯಂತ ಯಾವ ಕೆರೆಗಳ ಭೂಮಿ ಕಬಳಿಕೆಯಾಗಿದೆ, ಅಧಿಕಾರಿಗಳು ಕೈಗೊಂಡ ಕ್ರಮಗಳ ಕುರಿತು ಸಕಾಲಕ್ಕೆ ಮಾಹಿತಿ ನೀಡಬೇಕು. ಪ್ರಕ್ರಿಯೆಯ ಸಮಗ್ರ ವಿವರ ನೀಡಲು ಮಾ.10 ಕೊನೆಯ ದಿನವಾಗಿದೆ ಎಂಬುದನ್ನು ಮನಗಂಡು ಯಾವ ಒತ್ತಡಕ್ಕೂ ಮಣಿಯದೆ ಕಾರ್ಯೋನ್ಮುಖರಾಗಬೇಕು ಎಂದು ಹೇಳಿದರು.


ತಹಸೀಲ್ದಾರ್ ಎಂ.ಜಿ.ಸಂತೋಷ್‌ಕುಮಾರ್, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್‌ಗಳಾದ ರವೀಶ್, ಉಮೇಶ್,ಶಿವಾನಂದ್, ಕಂದಾಯ ಇಲಾಖೆಯ ಶಿವಶಂಕರ್, ಮಂಜುನಾಥ್ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net