ವೇತನ ನೀಡದಿದ್ದರೆ ಆತ್ಮಹತ್ಯೆ ಎಚ್ಚರಿಕೆ

ARASIKERE GP 08
Published on

ಅರಸೀಕೆರೆ: ವೇತನ ನೀಡದಿದ್ದರೆ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅರಸೀಕೆರೆ ಗ್ರಾಮ ಪಂಚಾಯಿತಿ ದಿನಗೂಲಿ ನೌಕರರು ಎಚ್ಚರಿಕೆ ನೀಡಿದ್ದಾರೆ.

ಸಂಬಳ ನೀಡಲು ಸತಾಯಿಸುತ್ತಿದ್ದ ಗ್ರಾಪಂ ಪಿಡಿಒ ಮತ್ತು ಗ್ರಾಮ ಲೆಕ್ಕಾಧಿಕಾರಿಯನ್ನು ಕಚೇರಿಯಲ್ಲೇ ಕೂಡಿಹಾಕಿ ಮಂಗಳವಾರ ಪ್ರತಿಭಟನೆ ಕೈಗೊಂಡಿದ್ದ ನೌಕರರು ಬುಧವಾರವೂ ತಮ್ಮ ಹೋರಾಟ ಮುಂದುವರಿಸಿ, ಒಂದು ವೇಳೆ ಸಂಬಳ ನೀಡದಿದ್ದರೆ ಎಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸ್ಥಳಕ್ಕೆ ದೌಡಾಯಿಸಿದ ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ, ಒಂದೆರಡು ದಿನದಲ್ಲಿ ಬಾಕಿ ಸಂಬಳ ನೀಡಲು ಮೇಲಧಿಕಾರಿಗಳಿಗೆ ಸೂಚಿಸುತ್ತೇನೆ. ಈಗ ಪ್ರತಿಭಟನೆ ಕೈಬಿಡಿ ಎಂದು ಮನವೊಲಿಸಲು ಮುಂದಾದರು.

ತಾಪಂ ಇಒ ಅನಂತ್‌ರಾಜ್ ಪಂಚಾಯಿತಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಇದಾವುದಕ್ಕೂ ಜಗ್ಗದ ನೌಕರರು ನಮಗೆ ಸಂಬಳ ಬಿಡುಗಡೆ ಮಾಡಿದ ಮೇಲೆಯೇ ಹೋರಾಟ ನಿಲ್ಲಿಸುತ್ತೇವೆ. ಇಲ್ಲವಾದರೆ ಎಲ್ಲರೂ ಒಟ್ಟಿಗೆ ಪ್ರಾಣ ಬಿಡುತ್ತೇವೆ ಎಂದು ಪಟ್ಟುಹಿಡಿದರು.

ಪ್ರತಿಭಟನೆಯಲ್ಲಿ ನಾಗರಾಜ್, ಶಶಿಕುಮಾರ್, ಸುನೀಲ್ ಕುಮಾರ್, ಮಂಜಪ್ಪ, ಕಣುವಪ್ಪ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net