ಮನೆ ಮೇಲೆ ಉರುಳಿದ ವಿದ್ಯುತ್ ಕಂಬ

16arsph2ep
Published on

ಅರಸೀಕೆರೆ: ಸುಭಾಷ್ ನಗರ ಬಡಾವಣೆಯ ಮನೆಯೊಂದರ ಮೇಲೆ ಮಂಗಳವಾರ ಶಿಥಿಲವಾದ ವಿದ್ಯುತ್ ಕಂಬ ಮುರಿದುಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ.

ಸೆಸ್ಕ್ ಅಧಿಕಾರಿಗಳಿಗೆ ಕಂಬ ತೆರವುಗೊಳಿಸುವಂತೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅವಘಡ ಸಂಭವಿಸಿದ್ದರೆ ಯಾರು ಹೊಣೆ ಎಂದು ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು ಕಿಡಿಕಾರಿದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸೆಸ್ಕ್ ಅಧಿಕಾರಿಗಳು ಕಂಬ ತೆರವುಗೊಳಿಸಿ ಆತಂಕಕ್ಕೆ ತೆರೆ ಎಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net