ಬೂಸ್ಟರ್ ಡೋಸ್ ಪಡೆದ ಸಂಸದ

17012022 Arasikere booster dose
??????????
Published on


ಅರಸೀಕೆರೆ (ಹರಪನಹಳ್ಳಿ ತಾ): ಕರೊನಾ ಮೂರನೇ ಅಲೆ ಮಕ್ಕಳಿಗೆ ಹೆಚ್ಚು ಬಾಧಿಸುತ್ತಿರುವುದರಿಂದ ಪಾಲಕರು ಹಾಗೂ ಶಿಕ್ಷಕರು ಹೆಚ್ಚಿನ ನಿಗಾ ವಹಿಸಬೇಕು ಎಂದು ಸಂಸದ ವೈ. ದೇವೇಂದ್ರಪ್ಪ ಹೇಳಿದರು.

ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಪತ್ನಿ ಹಾಗೂ ಕುಟುಂಬ ಸದಸ್ಯರೊಂದಿಗೆ ಆಗಮಿಸಿ ಬೂಸ್ಟರ್ ಡೋಸ್ ಪಡೆದು ಮಾತನಾಡಿದರು. ಮನೆಯಿಂದ ಹೊರ ಬರುವ ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್ ಬಳಕೆ ಜತೆಗೆ ದೈಹಿಕ ಅಂತರ ಕಾಪಾಡಿಕೊಳ್ಳಬೇಕು ಎಂದರು.

ಸಂಸದರ ಪತ್ನಿ, ಮಾಜಿ ಜಿಪಂ ಸದಸ್ಯೆ ವೈ. ಸುಶೀಲಮ್ಮ, ಕುಟುಂಬ ಸದಸ್ಯರು, ಡಾ. ಶಕುಂತಲಾ ಪಾಟೀಲ್, ಆರೋಗ್ಯ ಇಲಾಖೆ ಸಿಬ್ಬಂದಿ ವನಜಾಕ್ಷಿ, ರೇಖಾ, ಬಾಲಚಂದ್ರ, ರಮೇಶ್, ಪಕ್ಕೀರಮ್ಮ ಹಾಗೂ ಕೊಟ್ರೇಶ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net