ಥೈರಾಯಿಡ್ ಉಚಿತ ಪರೀಕ್ಷೆಗೆ ಚಾಲನೆ

12arsph2ep
Published on

ಅರಸೀಕೆರೆ : ಆರೋಗ್ಯ ತಪಾಸಣೆಗೆ ಮೊದಲ ಆದ್ಯತೆ ನೀಡಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಿವಸ್ವಾಮಿ ಹೇಳಿದರು.ನಗರದ ಸರ್ಕಾರಿ ಜೆ.ಸಿ.ಆಸ್ಪತ್ರೆಯ ತಾಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಥೈರಾಯಿಡ್ ಉಚಿತ ಪರೀಕ್ಷೆಗೆ ಚಾಲನೆ ನೀಡಿ ಮಾತನಾಡಿದರು.
ತಾಲೂಕಿನಲ್ಲಿ ಪ್ರತಿ ವರ್ಷ 4, 000ಕ್ಕೂ ಹೆಚ್ಚಿನ ಗರ್ಭಿಣಿಯರಿಗೆ ಆರೋಗ್ಯ ಇಲಾಖೆ ಈ ಪರೀಕ್ಷೆ ಮಾಡುತ್ತಿರುವುದು ಅನುಕೂಲವಾಗಲಿದೆ ಎಂದರು. ಗರ್ಭಾವ್ಯವಸ್ಥೆಯಲ್ಲಿ ಮಗುವಿನ ಬೆಳವಣಿಗೆಯ ಮೇಲೆ ಅನ್ಯ ಪರಿಣಾಮ ಬೀರುವುದನ್ನು ಇದರಿಂದ ತಡೆಗಟ್ಟಬಹುದು. ಥೈರಾಯಿಡ್ ಇದ್ದ ಸಂದರ್ಭದಲ್ಲಿ ವಿಪರೀತ ಆಯಾಸ, ಕೂದಲು ಉದುರುವುದು, ನಡುಕ, ಬೆವರು ಮತ್ತು ಹಸಿವಿನ ಲಕ್ಷಣ ಕಂಡುಬರುತ್ತವೆ.
ವಿಶ್ವದಲಿ ್ಲಪ್ರತಿ 8 ಮಹಿಳೆಯರಲ್ಲಿ ಒಬ್ಬರಿಗೆ ಈ ಸಮಸ್ಯೆ ಕಾಡುತ್ತಿದೆ. ಔಷಧಿಗಳನ್ನು ಪಡೆದು ಸಮಸ್ಯೆಗಳನ್ನು ಗುಣಪಡಿಸಿಕೊಳ್ಳಬಹುದು ಎಂದರು. ಬಡ ಹಾಗೂ ಮಧ್ಯಮ ವರ್ಗದ ಜನರ ಆರೋಗ್ಯ ಪಾಲನೆಗೆ ಇಲಾಖೆ ಬದ್ಧವಾಗಿದೆ ಎಂದು ಅವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net