ಮುತ್ತು ಮಾರಿಯಮ್ಮ ದೇವಿ ಕರಗ ಮಹೋತ್ಸವ

27 Arasi Temple
Published on

ಅರಸೀಕೆರೆ: ನಗರದ ಹಾಸನ ರಸ್ತೆ ಎಡಭಾಗದ ಬಡಾವಣೆಗೆ ಹೊಂದಿಕೊಂಡಿರುವ ಶ್ರೀ ಮುತ್ತು ಮಾರಿಯಮ್ಮ ದೇವಿ ಕರಗ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.

ಕಂತೇನಹಳ್ಳಿ ಕೆರೆ ಬಳಿ ದೇವಿಯ ಕರಗಕ್ಕೆ ಪೂಜೆ ಸಲ್ಲಿಸಿದ ನಂತರ ಬರಿಗಾಲಲ್ಲಿ ದೇಗುಲದ ವರೆಗೂ ಮೆರವಣಿಗೆ ನಡೆಸಲಾಯಿತು. ಬೆನ್ನಿಗೆ ಕೊಕ್ಕೆ ಸಿಕ್ಕಿಸಿಕೊಂಡು ದೇವಿ ಮೂರ್ತಿ ಇರುವ ವಾಹನವನ್ನು ಹರಕೆ ಹೊತ್ತವರು ಎಳೆದು ತರುತ್ತಿದ್ದ ದೃಶ್ಯ ನಿಬ್ಬೆರಗಾಗಿಸಿತು. ಪಟಾಕಿ ಸಿಡಿಸಿ ,ಪುಷ್ಪಾರ್ಚನೆ ಮಾಡಿ ಕರಗಹೊತ್ತವರನ್ನು ಬರಮಾಡಿಕೊಂಡಿದ್ದು

ವಿಶೇಷವಾಗಿತ್ತು. ನೂರಾರು ಭಕ್ತರು ಈ ಸಂದರ್ಭ ಹಾಜರಿದ್ದರು. ದೇವಾಲಯ ಸಮಿತಿ ವತಿಯಿಂದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಕರಗ ಹೊತ್ತವರೊಂದಿಗೆ ನೂರಾರು ಭಕ್ತರು ಹೆಜ್ಜೆ ಹಾಕಿದರು. ಇದೇ ಸಂದರ್ಭ ಮುನೇಶ್ವರ ದೇಗುಲದ ಆವರಣದಲ್ಲಿ ನಡೆದ ರಾಟೆ ಉತ್ಸವ ಜನಮನ ಸೆಳೆಯಿತು. ಜಾತ್ರಾ ಮಹೋತ್ಸವ ಮೇ.29ರಂದು ಸಂಪನ್ನಗೊಳ್ಳಲಿದೆ. ಇದಕ್ಕಾಗಿ ತಯಾರಿ ಪೂರ್ಣಗೊಂಡಿದೆ.

2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net