

ಅರಸೀಕೆರೆ ಗ್ರಾಮಾಂತರ : ಕಟ್ಟೆಮನೆ ಹಾರನಹಳ್ಳಿ ಬಳಗದ ವತಿಯಿಂದ ಗಂಡಸಿ ಹೋಬಳಿ ಮಾದೇವರಲ್ಲಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಕಾಲಭೈರವೇಶ್ವರ ಸ್ವಾಮಿ, ಲಕ್ಷ್ಮೀದೇವಿ ಮತ್ತು ಮಾಳಮ್ಮ ದೇವಿ, ಬನಶಂಕರಿ ಹಾಗೂ ಗಣೇಶ ದೇವಾಲಯದ ಲೋಕಾರ್ಪಣೆ ಏ. 6 ಮತ್ತು 7ರಂದು ನಡೆಯಲಿದೆ. ಧಾರ್ಮಿಕ ಪೂಜಾ ಕಾರ್ಯಗಳು ದೇವಾಂಗ ಸಮುದಾಯದ ಶ್ರೀ ದಯಾನಂದ ಪುರಿ ಸ್ವಾಮೀಜಿ ಹಾಗೂ ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ನೆರವೇರಲಿದೆ. ಶಾಸಕ ಶಿವಲಿಂಗೇಗೌಡ ಸೇರಿದಂತೆ ವಿವಿಧ ಸಂಘ, ಸಂಸ್ಥೆ ಮುಖಂಡರು ಭಾಗವಹಿಸಲಿದ್ದಾರೆ. ಎರಡೂ ದಿನ ಗಣಪತಿ ಹೋಮ, ನವಗ್ರಹ ಹೋಮ ಸೇರಿದಂತೆ ವಿವಿಧ ಹೋಮ, ಹವನ, ಅಭಿಷೇಕ, ಅರ್ಚನೆಗಳು ಮತ್ತು ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.